ಜಾವೇದ್ ಅಖ್ತರ್ ಗೆ ಶಾಕ್ ನೀಡಿದ 'ಪಿಎಂ ನರೇಂದ್ರ ಮೋದಿ!'

ಪಿಎಂ ನರೇಂದ್ರ ಮೋದಿಯಿಂದ ನನಗೆ ಅಚ್ಚರಿ ಉಂಟಾಗಿದೆ ಎಂದು ಹಿರಿಯ ಕವಿ, ರಾಜಕಾರಣಿ ಜಾವೇದ್ ಅಖ್ತರ್ ಹೇಳಿದ್ದಾರೆ.
ಜಾವೇದ್ ಅಖ್ತರ್ ಗೆ ಶಾಕ್ ನೀಡಿದ 'ಪಿಎಂ ನರೇಂದ್ರ ಮೋದಿ!'
ಜಾವೇದ್ ಅಖ್ತರ್ ಗೆ ಶಾಕ್ ನೀಡಿದ 'ಪಿಎಂ ನರೇಂದ್ರ ಮೋದಿ!'
Updated on: 
ಪಿಎಂ ನರೇಂದ್ರ ಮೋದಿಯಿಂದ ನನಗೆ ಅಚ್ಚರಿ ಉಂಟಾಗಿದೆ ಎಂದು ಹಿರಿಯ ಕವಿ, ರಾಜಕಾರಣಿ ಜಾವೇದ್ ಅಖ್ತರ್ ಹೇಳಿದ್ದಾರೆ. 
ತಮಗೆ ಆಗಿರುವ ಅಚ್ಚರಿಯ ಬಗ್ಗೆ ಟ್ವೀಟ್ ಮಾಡಿರುವ ಜಾವೇದ್ ಅಖ್ತರ್, ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ಪಿಎಂ ನರೇಂದ್ರ ಮೋದಿ ಕುರಿತು ಮಾತನಾಡಿದ್ದಾರೆ. ಟ್ರೇಲರ್ ಬಿಡುಗಡೆಯಾಗಿದ್ದು ಚಿತ್ರಕ್ಕೆ ಸಾಹಿತ್ಯ ರಚನೆ ಮಾಡಿರುವ  ಪ್ರಸೋನ್ ಜೋಶಿ, ಸಮೀರ್, ಅಭೇಂದ್ರ ಕುಮಾರ್ ಉಪಾಧ್ಯಾಯ್, ಸೇರಿದಟ್ಮೆ ಹಲವರಿಗೆ ಕೃತಜ್ಞತೆ ಸಲ್ಲಿಸಲಾಗಿತ್ತು. ಈ ಪಟ್ಟಿಯಲ್ಲಿ ಜಾವೇದ್ ಅಖ್ತರ್ ಹೆಸರೂ ಉಲ್ಲೇಖಗೊಂಡಿದೆ. 
ಇದನ್ನು ಗಮನಿಸಿ ಟ್ವೀಟ್ ಮಾಡಿರುವ ಜಾವೇದ್ ಅಖ್ತರ್, ಪಿಎಂ ನರೇಂದ್ರ ಮೋದಿ ಚಿತ್ರಕ್ಕೆ ನಾನು ಯಾವುದೇ ಸಾಹಿತ್ಯವನ್ನೂ ರಚನೆ ಮಾಡಿಲ್ಲ. ಆದರೂ ಪಟ್ಟಿಯಲ್ಲಿ ನನ್ನ ಹೆಸರನ್ನು ನೋಡಿ ನನಗೆ ಶಾಕ್ ಆಗಿದೆ ಎಂದು ಹೇಳಿದ್ದಾರೆ. 
ಜಾವೇದ್ ಅಖ್ತರ್ ಟ್ವೀಟ್ ನ್ನು ಅವರ ಪತ್ನಿ ಶಬಾನಾ ಅಜ್ಮಿ ಕೂಡಾ ರಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com