ಹೈದ್ರಾಬಾದ್ : ನಗರದ ಹೊರವಲಯದಲ್ಲಿರುವ ಮೆಗಾಸ್ಟಾರ್ ಚಿರಂಜೀವಿ ಅವರ ಫಾರ್ಮ್ ಹೌಸ್ ನಲ್ಲಿ ಬೆಂಕಿ ಕಾಣಸಿಕೊಂಡಿದ್ದು, ಸೈ ರಾ ನರಸಿಂಹ ರೆಡ್ಡಿ ಚಿತ್ರದ ಸೆಟ್ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಡಿಪೇಟೆಯ ಬಳಿಯ ಕೆರೆಯ ಬಳಿ ಈ ಅವಘಡ ಸಂಭವಿಸಿದೆ. ಫಾರ್ಮ್ ಹೌಸ್ ನಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸೈ ರಾ ನರಸಿಂಹ ರೆಡ್ಡಿ ಚಿತ್ರದ ಸೆಟ್ ನಲ್ಲಿ ಯಾರೂ ಇರಲಿಲ್ಲ ಬೆಂಕಿಯಿಂದಾಗಿ ಸೆಟ್ ನ ಒಂದು ಭಾಗ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈ ರಾ ನರಸಿಂಹ ರೆಡ್ಡಿ ಉಯ್ಯಾಲಾವಾಡ ನರಸಿಂಹ ರೆಡ್ಡಿ ಜೀವನಾಧಾರಿತ ಐತಿಹಾಸಿಕ ಚಿತ್ರವಾಗಿದ್ದು, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮಾಡಲಾಗುತ್ತಿದೆ. ಮೆಗಾಸ್ಟಾರ್ ಚಿರಂಜೀವಿ, ಬಿಗ್ ಬಿ ಅಮಿತಾಬ್ ಬಚ್ಚನ್ , ನಯನಾ ತಾರಾ, ತಮನ್ನಾ ಮತ್ತಿತರ ತಾರಾಗಣವಿದೆ.
ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ಚಿರಂಜೀವಿ ಪುತ್ರ ಹಾಗೂ ಖ್ಯಾತ ನಟ ರಾಮ್ ಚರಣ್ ನಿರ್ಮಾಣ ಮಾಡುತ್ತಿದ್ದಾರೆ.
Advertisement