'ಅನುಷ್ಕಾ' ನಟನೆ ಸವಾಲಾಗಿತ್ತು: ಅಮೃತಾ ಅಯ್ಯಂಗಾರ್

ಕನ್ನಡ ಚಿತ್ರರಂಗದ ವಾತಾವರಣಕ್ಕೆ ನಟಿ ಅಮೃತಾ ಅಯ್ಯಂಗಾರ್ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ...
ಅನುಷ್ಕಾ ಚಿತ್ರದ ದೃಶ್ಯ
ಅನುಷ್ಕಾ ಚಿತ್ರದ ದೃಶ್ಯ
Updated on
ಕನ್ನಡ ಚಿತ್ರರಂಗದ ವಾತಾವರಣಕ್ಕೆ ನಟಿ ಅಮೃತಾ ಅಯ್ಯಂಗಾರ್ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಒ, ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್ ಮತ್ತು ಶಿವ ತೇಜಸ್ ನಿರ್ದೇಶನದ ಚಿರಂಜೀವಿ ಸರ್ಜಾ ಜೊತೆಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಆದರೆ ಇಲ್ಲಿ ಅಮೃತಾ ಅಯ್ಯಂಗಾರ್ ಅನುಷ್ಕಾ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಶೂಟಿಂಗ್ ವೇಳೆ ನಡೆದ ಹಲವು ಘಟನೆಗಳನ್ನು ಅವರು ಹೇಳುತ್ತಾರೆ. ದೇವರಾಜ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಅಮೃತಾ ಕುದುರೆ ಸವಾರಿ, ಫೈಟಿಂಗ್ ಸ್ಟಂಟ್ ಗಳನ್ನು ಮಾಡುತ್ತಿದ್ದಾರೆ.
ಜೀವಕ್ಕೆ ಅಪಾಯ ತರುವ ರೀತಿಯ ಅನುಭವ ಅನುಷ್ಕಾ ಚಿತ್ರೀಕರಣದ ವೇಳೆ ಆಗಿದೆ. ಕುದುರೆಯಲ್ಲಿ ಕುಳಿತು ಫೈಟಿಂಗ್ ಸನ್ನಿವೇಶ ಮಾಡಬೇಕಾಗಿತ್ತು. ಹಿಂದುಗಡೆಯಲ್ಲಿ ಬಾಂಬ್ ಇಟ್ಟು ಸಿಡಿಯುವ ದೃಶ್ಯದ ಎದುರು ಕುದುರೆ ಮೇಲೆ ಕುಳಿತು ಫೈಟಿಂಗ್ ಸನ್ನಿವೇಶ ಮಾಡಿದ್ದೆವು. ಆಗ ಭಯವಾಗುತ್ತಿತ್ತು ಎನ್ನುತ್ತಾರೆ ಅಮೃತಾ.
ಎಸ್ ಕೆ ಗಂಗಾಧರ್ ನಿರ್ಮಾಣದ ಅನುಷ್ಕಾ ಚಿತ್ರವನ್ನು ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ನಾಳೆ ಕನ್ನಡದಲ್ಲಿ ಮಾತ್ರ ತೆರೆಗೆ ಬರುತ್ತಿದ್ದು ಮುಂದಿನ ದಿನಗಳಲ್ಲಿ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ. ಚಿತ್ರದಲ್ಲಿ ರೂಪೇಶ್ ಶೆಟ್ಟಿ, ಸಾಧು ಕೋಕಿಲಾ, ಆದಿ ಲೋಕೇಶ್ ಮತ್ತು ರುಮಶರ್ಮಾ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com