ನ.29ಕ್ಕೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ದಿಯಾ ಮರು ಬಿಡುಗಡೆ
6-5=2 ಸಕ್ಸಸ್ ಚಿತ್ರ ಬಳಿಕ ನಿರ್ಮಾಪಕ ಕೃಷ್ಣ ಚೈತನ್ಯ ಹಾಗೂ ನಿರ್ದೇಶಕ ಕೆ.ಎಸ್.ಅಶೋಕ್ ಕಾಂಬಿನೇಷನ್ ನಿಂದ ಹೊರಬಂದಿರುವ ದಿಯಾ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗಿದ್ದು, ನ.29ಕ್ಕೆ ಚಿತ್ರ ಮರು ಬಿಡುಗಡೆಗೊಳ್ಳಲಿದೆ.
ಚಿತ್ರವನ್ನು ನ.15ಕ್ಕೆ ಮರು ಬಿಡುಗಡೆ ಮಾಡಲು ಚಿತ್ರದ ತಂಡ ನಿರ್ಧರಿಸಿತ್ತು. ಆದರೆ, ಈ ತಿಂಗಳಿನಲ್ಲಿ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಚಿತ್ರ ಸೇರಿದಂತೆ 12ಕ್ಕೂ ಹೆಚ್ಚು ಚಿತ್ರಗಳು ತೆರೆಕಾಣುತ್ತಿದೆ. ಈ ಹಿನ್ನಲೆಯಲ್ಲಿ ಚಿತ್ರದ ಮರು ಬಿಡುಗಡೆ ದಿನಾಂಕವನ್ನು ಚಿತ್ರದ ತಂಡ ಮುಂದೂಡಿದೆ.
6-5=2 ಹಾರರ್ ಜಾನರ್ ಇದ್ದ ಚಿತ್ರ 2013ರಲ್ಲಿ ಬಿಡುಗಡೆಗೊಂಡಿತ್ತು. ನೈಜ ಘಟನೆ ಎಂದು ಹೇಳಿಕೊಂಡು ಬಂದು ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ಹೆದರಿಸಿತ್ತು. ಇದೀಗ 6 ವರ್ಷಗಳ ಬಳಿಕ ಇದೇ ಚಿತ್ರದ ನಿರ್ದೇಶಕ ಅಶೋಕ್ ಮತ್ತೊಂದು ಹೊಸ ಕತೆ ಹೇಳಲು ಸಜ್ಜುಗೊಂಡಿದ್ದಾರೆ.
ಚಿತ್ರದ ಟ್ರೈಲರ್ ಕೊಂಚ ಮಟ್ಟಿಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹಾಗೂ ಕುತೂಹಲಗಳನ್ನು ಮೂಡಿಸಿದೆ. ಖುಷಿ ಹಾಗೂ ದೀಕ್ಷಿತ್ ಶೆಟ್ಟಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ದಿಯಾ ಟೈಟಲ್'ಗೆ ಲೈಫ್ ಈಸಿ ಫುಲ್ ಆಫ್ ಸರ್ಪ್ರೈಸ್' ಎಂಬ ಟ್ಯಾಗ್ ಲೈನ್ ಇದ್ದು, ಅದೇ ರೀತಿಯ ಸರ್ಪ್ರೈಸ್'ನ ಝಲಕ್ ಟ್ರೈಲರ್'ನಲ್ಲೂ ಇದೆ. ಚಿತ್ರ ಯಾ ರೊಮ್ಯಾಂಟಿಕ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ