ಬೆಂಗಳೂರು 69 ಶೂಟಿಂಗ್ ಮುಗಿಸಿದ ಅನಿತಾ ಭಟ್ 

ಸ್ಯಾಂಡಲ್‌ವುಡ್‌ನ‌ಲ್ಲಿ ತನ್ನ ಬೋಲ್ಡ್‌ ಮತ್ತು ಗ್ಲಾಮರಸ್‌ ಲುಕ್‌ನಿಂದ ಗಮನ ಸೆಳೆದಿರುವ ನಟಿ ಅನಿತಾ ಭಟ್‌ ಸದ್ಯ ಬೆಂಗಳೂರು-69 ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.
ಅನಿತಾ ಭಟ್
ಅನಿತಾ ಭಟ್
Updated on

ಸ್ಯಾಂಡಲ್‌ವುಡ್‌ನ‌ಲ್ಲಿ ತನ್ನ ಬೋಲ್ಡ್‌ ಮತ್ತು ಗ್ಲಾಮರಸ್‌ ಲುಕ್‌ನಿಂದ ಗಮನ ಸೆಳೆದಿರುವ ನಟಿ ಅನಿತಾ ಭಟ್‌ ಸದ್ಯ ಬೆಂಗಳೂರು-69 ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.

ಇದೊಂದು ಸಸ್ಪೆನ್ಸ್‌, ಸೋಶಿಯಲ್‌ ಥ್ರಿಲ್ಲರ್‌ ಸಿನಿಮಾ.ಇಬ್ಬರು ಹುಡುಗರು ಸೇರಿ ಒಬ್ಬ ಶ್ರೀಮಂತ ಹುಡುಗಿಯನ್ನು ಕಿಡ್ನಾಪ್‌ ಮಾಡುತ್ತಾರೆ. ಯಾಕೆ ಆ ಕಿಡ್ನಾಪ್‌ ಮಾಡುತ್ತಾರೆ. ಹೇಗೆ ಮಾಡುತ್ತಾರೆ ಎಂಬುದೇ ಸಿನಿಮಾ ಕಥೆಯಾಗಿದೆ.

ಆಮೇಲೆ ಏನಾಗುತ್ತದೆ ಅನ್ನೋದು ಚಿತ್ರದ ಒನ್‌ಲೈನ್‌ ಸ್ಟೋರಿ. ಚಿತ್ರದ ಬಹುತೇಕ ಭಾಗ ಮೂರು ಪ್ರಮುಖ ಪಾತ್ರಗಳ ಸುತ್ತ ನಡೆಯುತ್ತದೆ’ ಎನ್ನುತ್ತಾರೆ. ಇನ್ನು “ಬೆಂಗಳೂರು-69′ ಚಿತ್ರದಲ್ಲಿ ಒಂದು ರೊಮ್ಯಾಂಟಿಕ್‌ ಹಾಡಿದ್ದು, ಆ ಹಾಡಿನಲ್ಲಿ ಅನಿತಾ ಬೋಲ್ಡ್‌ ಆ್ಯಂಗ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ನನ್ನ ಪಾತ್ರಕ್ಕೆ ಸಾಕಷ್ಟು ಸ್ಕೋಪ್‌ ಇದೆ. ಚಿತ್ರವ ಮತ್ತು ನನ್ನ ಪಾತ್ರ ಎರಡೂ ಚೆನ್ನಾಗಿ ಮೂಡಿಬಂದಿದೆ’ ಎಂದು ವಿವರಣೆ ಕೊಡುತ್ತಾರೆ ಅನಿತಾ ಭಟ್‌. ಸದ್ಯ “ಬೆಂಗಳೂರು-69′ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಗಿದಿದ್ದು, ಈ ವರ್ಷದ ಕೊನೆಗೆ ಅಥವಾ ಜನವರಿಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಇದೆಲ್ಲದರ ನಡುವೆ ಅನಿತಾ ಭಟ್‌, “ಕಲಿವೀರ’, “ಸದ್ಗುಣ ಸಂಪನ್ನ ಮಾಧವ’ ಮತ್ತು “ಕನ್ನೇರಿ’ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಆ ಚಿತ್ರಗಳು ಕೂಡ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿವೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com