ಮೂವರು ಸಹೋದರರನ್ನು ಒಂದೇ ಚಿತ್ರದಲ್ಲಿ ತೋರಿಸಿದ್ದು ದೊಡ್ಡ ಸಾಧನೆ: ಚೇತನ್ ಕುಮಾರ್

ಭರಾಟೆ ಚಿತ್ರದಲ್ಲಿ ಅಗ್ನಿ ಖ್ಯಾತಿಯ ಸಾಯಿ ಕುಮಾರ್, ಆರುಮುಘಂ ಖ್ಯಾತಿಯ ರವಿಶಂಕರ್ ಮತ್ತು ವಾನರಂ ಖ್ಯಾತಿಯ ಅ್ಯಯಪ್ಪ ನಟಿಸಿದ್ದು ಒಂದು ಚಿತ್ರದಲ್ಲಿ ಮೂವರು ಖಳನಟರು ಹಾಗೂ ಅಣ್ಣ ತಮ್ಮಂದಿರು ಕಾಣಿಸಿಕೊಂಡಿದ್ದಾರೆ.
ರವಿಶಂಕರ್-ಸಾಯಿಕುಮಾರ್-ಅಯ್ಯಪ್ಪ
ರವಿಶಂಕರ್-ಸಾಯಿಕುಮಾರ್-ಅಯ್ಯಪ್ಪ
Updated on

ಬೆಂಗಳೂರು: ಭರಾಟೆ ಚಿತ್ರದಲ್ಲಿ ಅಗ್ನಿ ಖ್ಯಾತಿಯ ಸಾಯಿ ಕುಮಾರ್, ಆರುಮುಘಂ ಖ್ಯಾತಿಯ ರವಿಶಂಕರ್ ಮತ್ತು ವಾನರಂ ಖ್ಯಾತಿಯ ಅ್ಯಯಪ್ಪ ನಟಿಸಿದ್ದು ಒಂದು ಚಿತ್ರದಲ್ಲಿ ಮೂವರು ಖಳನಟರು ಹಾಗೂ ಅಣ್ಣ ತಮ್ಮಂದಿರು ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಚೇತನ್ ಕುಮಾರ್ ಅವರು ಈ ಮೂವರು ಖಳನಟರನ್ನು ಒಂದೇ ವೇದಿಕೆ ಮೇಲೆ ತಂದಿದ್ದಾರೆ. ಆ ಮೂವರನ್ನು ಒಂದೇ ವೇದಿಕೆ ಮೇಲೆ ತಂದಿರುವುದು ದೊಡ್ಡ ಸಾಧನೆ ಎಂದು ಚೇತನ್ ಹೇಳಿದ್ದಾರೆ. 

ಭರಾಟೆ ಚಿತ್ರದಲ್ಲಿ ಬಹು ದೊಡ್ಡ ತಾರಾಗಣವಿದ್ದು 47 ಕಲಾವಿದರು ಅಭಿನಯಿಸಿದ್ದಾರೆ. ಅಕ್ಟೋಬರ್ 18ರಂದು ಚಿತ್ರ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. 

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸುಪ್ರೀತ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀಮುರಳಿಗೆ ಜೋಡಿಯಾಗಿ ಶ್ರೀಲೀಲಾ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com