ಕೊಟ್ಟ ಮಾತು ಉಳಿಸಿಕೊಂಡ ತಲೈವಾ: ನಿರ್ಮಾಪಕ ಕಲೈಜ್ಞಾನಂಗೆ ೧ ಕೋಟಿ ರು. ಬೆಲೆಬಾಳುವ ಗಿಫ್ಟ್!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ದಾನ ಮಾಡುವುದರಲ್ಲಿ ಎತ್ತಿದ ಕೈ ಎಂಬುದು ಎಲ್ಲರಿಗೂ ತಿಳಿದಿದೆ. ನುಡಿದಂತೆ ನಡೆವ ಅವರ ಗುಣಕ್ಕೆ ಮಾರುಹೋಗದವರೇ ಇಲ್ಲ.
ರಜನಿಕಾಂತ್
ರಜನಿಕಾಂತ್
Updated on: 

ಚೆನ್ನೈ/ಬೆಂಗಳೂರು: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ದಾನ ಮಾಡುವುದರಲ್ಲಿ ಎತ್ತಿದ ಕೈ ಎಂಬುದು ಎಲ್ಲರಿಗೂ ತಿಳಿದಿದೆ.  ನುಡಿದಂತೆ ನಡೆವ ಅವರ ಗುಣಕ್ಕೆ ಮಾರುಹೋಗದವರೇ ಇಲ್ಲ. ಇಂತಹ ತಲೈವಾ ಈ ಹಿಂದೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. 

ರಜನೀಕಾಂತ್ ಅವರ ತಮ್ಮ ನಿರ್ಮಾಪಕ ಕಲೈಜ್ಞಾನಂ ಅವರಿಗೆ ಸುಮಾರು ೧ ಕೋಟಿ ರೂ ಬೆಲೆ ಬಾಳುವ ಮನೆಯನ್ನು ಖರೀದಿಸಿ ಕಾಣಿಕೆಯಾಗಿ ನೀಡಿದ್ದಾರೆ. ೨೦೧೯ ಆಗಸ್ಟ್ ೧೪ರಂದು ಕಲೈಜ್ಞಾನಂ ಅವರ ೯೦ ನೇ ಹುಟ್ಟುಹಬ್ಬ ಮತ್ತು  ಚಲನಚಿತ್ರೋದ್ಯಮದಲ್ಲಿ ೫೦ ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಅವರ ಗೌರವಾರ್ಥವಾಗಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಕಲೈಜ್ಞಾನಂಗೆ ಮನೆ ಉಡುಗೊರೆಯಾಗಿ ನೀಡುವುದಾಗಿ ರಜನೀಕಾಂತ್ ಅವರು ಭರವಸೆ ನೀಡಿದ್ದರು. ಈ ಕಾರ್ಯಕ್ರಮವನ್ನು ಹಿರಿಯ ನಿರ್ದೇಶಕ ಭಾರತಿರಾಜ ಅವರು ಚೆನ್ನೈನಲ್ಲಿ ಆಯೋಜಿಸಿದ್ದರು. ಇದೀಗ ರಜನೀಕಾಂತ್  ಆ ಮಾತನ್ನು ನೆರವೇರಿಸಿದ್ದಾರೆ. 

ರಜನೀಕಾಂತ್ ಅವರನ್ನು ಸೋಲೋ ನಾಯಕನಾಗಿ ಚಿತ್ರವೊಂದರಲ್ಲಿ ನಿರ್ಮಾಪಕ ಹಾಗೂ ಬರಹಗಾರರಾದ ಕಲೈಜ್ಞಾನಂ ಅವರು ೧೯೭೮ ರಲ್ಲಿ ತಮ್ಮ ಭೈರವಿ ಸಿನಿಮಾ ಮೂಲಕ ಪರಿಚಯಿಸಿದ್ದರು.

ರಜನೀಕಾಂತ್ ಅವರು ಮನೆ ವಿಷಯ ಮಾತನಾಡುತ್ತಾ, ನನಗೆ ಇತ್ತೀಚಿಗೆ ಕಲೈಜ್ಞಾನಂ ಅವರು ಬಾಡಿಗೆ ಮನೆಯಲ್ಲಿರುವ ವಿಷಯ ತಿಳಿಯಿತು. ಅಲ್ಲದೆ ಮಂತ್ರಿ ಕಡಂಬೂರು ರಾಜು ಅವರು ಮುಖ್ಯಮಂತ್ರಿ ಅವರೊಡನೆ ಮಾತನಾಡಿ ಕಲೈಜ್ಞಾನಂ ಅವರಿಗೆ ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದಕ್ಕೆ ಧನ್ಯವಾದಗಳು. ಆದರೆ ನಾನು ಈ ಅವಕಾಶವನ್ನು ಬೇರೆ ಯಾರಿಗೂ ಕೊಡಲಾರೆ. ಅದಕ್ಕಾಗಿ ಅವರಿಗಾಗಿ ನಾನೇ ಮನೆ ಖರೀದಿ ಮಾಡಿರುವುದಾಗಿ ಹೇಳಿದ್ದರು.

ಕಲೈಜ್ಞಾನಂ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ರಜನಿಕಾಂತ್ ಹೊಸ ಮನೆಗೆ ಪ್ರವೇಶಿಸುವ ವಿಡಿಯೋ ಮತ್ತು ಚಿತ್ರಗಳು ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ೧೩೨೦ ಚದರ ಅಡಿ ಮನೆ ಅಪಾರ್ಟ್ ಮೆಂಟ್ ನ  ನೆಲಮಹಡಿಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com