ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 50 ನೇ ಸಿನಿಮಾ ಪೌರಾಣಿಕ ಕಥೆಯುಳ್ಳ ಕುರುಕ್ಷೇತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಿ 75ನೇ ದಿನದತ್ತ ಮುನ್ನುಗ್ಗುತ್ತಿದೆ, 2ಡಿ ಮತ್ತು 3ಡಿ ವರ್ಸನ್ ಮಲಯಾಳಂ ನಲ್ಲಿ ಅಕ್ಟೋಬರ್ 18 ರಂದು ಕೇರಳದ 100 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.
ಪೌರಾಣಿಕ ಸಿನಿಮಾವಾದ ಕುರುಕ್ಷೇತ್ರ ಸಿನಿಮಾವನ್ನು ಮುನಿರತ್ನ ನಿರ್ಮಿಸಿದ್ದು ನಾಗಣ್ಣ ನಿರ್ದೇಶಿಸಿದ್ದಾರೆ, ರನ್ನನ ಗದಾಯುದ್ದದಿಂದ ಕಥೆ ಆರಿಸಿಕೊಳ್ಳಲಾಗಿದ್ದು, ಈಗಾಗಲೇ ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗಲಿದೆ.
ದರ್ಶನ್ ಕುರುಕ್ಷೇತ್ರ ಸಿನಿಮಾದಲ್ಲಿ ಕೌರವ ದುರ್ಯೋದನನ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಹಿರಿಯ ನಟರಾದ ದಿವಂಗತ ಅಂಬರೀಷ್. ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Advertisement