'ಲವ್ ಮಾಕ್ಟೈಲ್'ನಲ್ಲಿ ಡಾರ್ಲಿಂಗ್ ಕೃಷ್ಣಗೆ ಹಲವು ಜವಾಬ್ದಾರಿ 

ಲವ್ ಮಾಕ್ ಟೈಲ್ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಟ್ರೈಲರ್ ಚಿತ್ರಪ್ರೇಮಿಗಳಿಗೆ ಹಿಡಿಸಿದೆ.
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್
Updated on: 

ಲವ್ ಮಾಕ್ ಟೈಲ್ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಟ್ರೈಲರ್ ಚಿತ್ರಪ್ರೇಮಿಗಳಿಗೆ ಹಿಡಿಸಿದೆ. ನಟ ಡಾರ್ಲಿಂಗ್ ಕೃಷ್ಣನಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ತಮ್ಮ ಹೋಂ ಬ್ಯಾನರ್ ಕೃಷ್ಣ ಟಾಕೀಸ್ ನಡಿ ರೊಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ಮಿಲನ ನಾಗರಾಜ್ ಜೊತೆ ನಿರ್ಮಿಸುತ್ತಿದ್ದಾರೆ. 


ಇಲ್ಲಿ ಕೃಷ್ಣ ಅವರು ನಟನೆ, ನಿರ್ದೇಶನ, ಚಿತ್ರಕಥೆ, ಕಥೆ, ಸಂಭಾಷಣೆ, ಸಾಹಸ ದೃಶ್ಯಗಳ ರಚನೆ, ನೃತ್ಯ ಹೀಗೆ ಹಲವು ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಚಿತ್ರಕ್ಕೆ ಧ್ವನಿ ನೀಡಿದ್ದಾರೆ.


43 ದಿನಗಳ ಕಾಲ ಶೂಟಿಂಗ್ ನಡೆಸಿದ್ದು ಒಂದು ವರ್ಷ ಈ ಚಿತ್ರದಲ್ಲೇ ಮಗ್ನರಾಗಿದ್ದಾರೆ. ಇಲ್ಲಿ 15 ವರ್ಷದಿಂದ 35 ವರ್ಷದವರೆಗಿನ ಪಾತ್ರವನ್ನು ಕೃಷ್ಣ ನಿರ್ವಹಿಸುತ್ತಿರುವುದರಿಂದ ಸಾಕಷ್ಟು ದೇಹವನ್ನು ಹುರಿಗೊಳಿಸಿದ್ದಾರಂತೆ. ದೇಹವನ್ನು ಈ ಮಟ್ಟಕ್ಕೆ ತರಲು 10 ವರ್ಷ ಹಿಡಿಯಿತು ಎನ್ನುತ್ತಾರೆ ಅವರು.


ಚಿತ್ರದಲ್ಲಿ ಅಮೃತ ಅಯ್ಯಂಗಾರ್, ಮಿಲನ ನಾಗರಾಜ್ ಕೂಡ ಪಾತ್ರ ಮಾಡಿದ್ದಾರೆ. ರಘು ದೀಕ್ಷಿತ್ ಅವರ ಸಂಗೀತ, ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣ, ಸಂಕಲನವಿದೆ, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com