ಮತ್ತೊಂದು 'ಹಾರರ್' ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅಭಿನಯ!

ಹೆಚ್.  ಲೋಹಿತ್ ನಿರ್ದೇಶನದ 'ದೇವಕಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಉಪೇಂದ್ರ, ಸ್ವಲ್ಪ ಬಿಡುವಿನ ಬಳಿಕ ಮುಂದಿನ ಚಿತ್ರಗಳನ್ನು ಅಂತಿಮಗೊಳಿಸಿದ್ದಾರೆ. ಧೀರ್ಘವಾಗಿ ಯೋಚಿಸಿ ಎರಡು ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 
ಪ್ರಿಯಾಂಕಾ ಉಪೇಂದ್ರ
ಪ್ರಿಯಾಂಕಾ ಉಪೇಂದ್ರ
Updated on: 

ಬೆಂಗಳೂರು: ಹೆಚ್.  ಲೋಹಿತ್ ನಿರ್ದೇಶನದ 'ದೇವಕಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಉಪೇಂದ್ರ, ಸ್ವಲ್ಪ ಬಿಡುವಿನ ಬಳಿಕ ಮುಂದಿನ ಚಿತ್ರಗಳನ್ನು ಅಂತಿಮಗೊಳಿಸಿದ್ದಾರೆ. ಧೀರ್ಘವಾಗಿ ಯೋಚಿಸಿ ಎರಡು ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 

ತಮಿಳಿನ 7 ನಾಟ್ಕಲ್ ಸಿನಿಮಾ ನಿರ್ದೇಶಿಸಿದ ಗೌತಮ್  ವಿ. ಪಿ. ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಶಕ್ತಿ ಪಿ ವಾಸು ಮೊದಲ ಬಾರಿಗೆ ಕನ್ನಡ  ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಿರ್ದೇಶಕ ಪಿ. ವಾಸು ಸಹೋದರ ಪಿ. ವಿಮಲ್ , ಗೌತಮ್ ನಿರ್ದೇಶನದ ಕನ್ನಡ ಚಿತ್ರಕ್ಕೆ  ಕಥೆ ಬರೆಯಲಿದ್ದಾರೆ.

ಹಾರರ್ ಕಥೆಯಾಧಾರಿತ ಇದು ಬಿಗ್ ಬಜೆಟ್ ಚಿತ್ರವಾಗಿದ್ದು, ಇದರಲ್ಲಿ ಸಾಕಷ್ಟು ಗ್ರಾಫಿಕ್ಸ್ ಕೆಲಸವಿರುತ್ತದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 

ಪ್ರೊಢಕ್ಷನ್ ಹೌಸ್, ಚಿತ್ರ ತಂಡ ಎಲ್ಲ ಬಗ್ಗೆ ನವೆಂಬರ್ ಮೊದಲ ವಾರದಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ. ಪ್ರಿಯಾಂಕಾ ಉಪೇಂದ್ರ ಅವರ ಜನ್ಮ ದಿನ ನವೆಂಬರ್ 9 ರಂದು ಪಸ್ಟ್ ಲುಕ್ ಬಿಡುಗಡೆಯಾಗಲಿದೆ. ಈ ಮಧ್ಯೆ ಉಳಿದ ತಂಡವನ್ನು ಅಂತಿಮಗೊಳಿಸಲಾಗುತ್ತಿದೆ. 

ಗೌತಮ್ ಚಿತ್ರ ಹೊರತುಪಡಿಸಿದಂತೆ ಹೊಸ ತಂಡದೊಂದಿಗೆ ಪ್ರಿಯಾಂಕಾ ಅಭಿನಯಿಸುತ್ತಿದ್ದಾರೆ. ಖಾಕಿದಾರಿ ಅವತಾರದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ. ಕೆಲವೊಂದು ಆಕ್ಷನ್ ದೃಷ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com