ಸ್ಯಾಂಡಲ್ ವುಡ್ ಗೆ 'ಮಸಾಲಾ ಕಾಫಿ' ಮ್ಯೂಸಿಕ್ ಬ್ಯಾಂಡ್ ಎಂಟ್ರಿ!

"ಮುಂದಿನ ನಿಲ್ದಾಣ" ಚಿತ್ರತಂಡ ಎಲ್ಲಾ ಒಳ್ಲೆಯ ಕಾರಣಗಳಿಂದ ಸುದ್ದಿಯಾಗುತ್ತಿದೆ. ಈ ಹಿಂದೆ ಯೂಟ್ಯೂಬ್‌ನಲ್ಲಿನ ಕ್ಯಾರೆಕ್ಟರ್ ಇಂಟ್ರೊಡಕ್ಷನ್ ಟೀಸರ್ ಬಿಡುಗಡೆಯಾಗಿದ್ದಾಗ ಇದುವರೆಗೆ ಲಕ್ಷಕ್ಕೂ ಹೆಚ್ಚು ವೀಕ್ಷಕರು ನೋಡಿ ಮೆಚ್ಚುಗೆ ಸೂಚಿಸಿದ್ದರು. ಇದೀಗ ತಂಡ ಚಿತ್ರದ ಮೊದಲ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆ ಮಾಡಲಿದೆ. ಬುಧವಾರ "ಮನಸೇ ಮಾಯ" ಎಂಬ ಹಾಡು ಬಿಡುಗಡೆಯಾಗಲಿದೆ
ಅನನ್ಯ ಕಶ್ಯಪ್
ಅನನ್ಯ ಕಶ್ಯಪ್
Updated on

"ಮುಂದಿನ ನಿಲ್ದಾಣ" ಚಿತ್ರತಂಡ ಎಲ್ಲಾ ಒಳ್ಲೆಯ ಕಾರಣಗಳಿಂದ ಸುದ್ದಿಯಾಗುತ್ತಿದೆ. ಈ ಹಿಂದೆ ಯೂಟ್ಯೂಬ್‌ನಲ್ಲಿನ ಕ್ಯಾರೆಕ್ಟರ್ ಇಂಟ್ರೊಡಕ್ಷನ್ ಟೀಸರ್ ಬಿಡುಗಡೆಯಾಗಿದ್ದಾಗ ಇದುವರೆಗೆ ಲಕ್ಷಕ್ಕೂ ಹೆಚ್ಚು ವೀಕ್ಷಕರು ನೋಡಿ ಮೆಚ್ಚುಗೆ ಸೂಚಿಸಿದ್ದರು. ಇದೀಗ ತಂಡ ಚಿತ್ರದ ಮೊದಲ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆ ಮಾಡಲಿದೆ. ಬುಧವಾರ "ಮನಸೇ ಮಾಯ" ಎಂಬ ಹಾಡು ಬಿಡುಗಡೆಯಾಗಲಿದೆ.

ವಿಶೇಷವೆಂದರೆ ಈ ಹಾಡನ್ನು ಪ್ರಖ್ಯಾತ ಮ್ಯೂಸಿಕ್ ಬ್ಯಾಂಡ್ ಮಸಾಲಾ ಕಾಫಿ ಬ್ಯಾಂಡ್ ಸಂಯೋಜಿಸಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಸೂರಜ್ ಸಂತೋಷ್ ಮತ್ತು ವರುಣ್ ಸುನಿಲ್ ಈ ಹಾಡನ್ನು ಹಾಡಿದ್ದಾರೆ.  ಗೀತರಚನೆಕಾರ ಕಿರಣ್ ಕಾವೇರಪ್ಪ ಸಾಹಿತ್ಯವಿದ್ದು ವಿಶ್ವ ಕಿರಣ್ ನಂಬಿ  ನೃತ್ಯ ಸಂಯೋಜನೆ ಮಾಡಿದ್ದಾರೆ. 

ಹಾಡು ಸಮಕಾಲೀನ ಮೂಮೆಂಟ್ಸ್ ಮತ್ತು ಶಾಸ್ತ್ರೀಯ ಸಂಗೀತ ಎರಡರ ಮಿಳಿತವಾಗಿದೆ.ಅನನ್ಯಾ ಕಶ್ಯಪ್ ಹಾಡಿನ ಅಭಿನಯದ ಭಾಗವಾಗಿದ್ದು ಜತೆಗೆ ಬ್ಯಾಂಡ್, ನಟರಾದ ಪ್ರವೀಣ್ ತೇಜ್ ಮತ್ತು ಅಜಯ್ ರಾಜ್ ಸಹ ನಟಿಸಿದ್ದಾರೆ.ಇನ್ನು "ರಾಝಿ" ಖ್ಯಾತಿಯ ಅರ್ಷದ್ ಖಾನ್ ಎಸ್ರಾಜ್ ನುಡಿಸಿದ್ದಾರೆ. "ಹಾಡು ತಾಜಾತನದಿಂದ ಕೂಡಿದೆ.ವಿಭಿನ್ನ ಶೈಲಿಯ ನಿರೂಪಣೆಯನ್ನು ಹೊಂದಿದೆ, ಅಲ್ಲಿ ನಟಿಯೊಂದಿಗೆ ಬ್ಯಾಂಡ್ ನ ಗಾಯಕರೂ ಕಾಣಿಸಿಕೊಂಡಿದ್ದಾರೆ. ಮ್ಯೂಸಿಕ್ ಆಲ್ಬಮ್ ಶೈಲಿಯನ್ನು ಚಲನಚಿತ್ರ ನಿರೂಪಣೆಯೊಂದಿಗೆ ಬೆರೆಸುವ ಮೂಲಕ, ಇದು ವೀಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಉಂಟುಮಾಡುತ್ತದೆ ”ಎಂದು ಚಿತ್ರದ ನಿರ್ದೇಶಕ ವಿನಯ್ ಭಾರದ್ವಾಜ್ ಹೇಳುತ್ತಾರೆ

ಹಾಡನ್ನು ಖಾಲಿಯಾದ ದೊಡ್ಡ ಬಾವಿಯಲ್ಲಿ ಚಿತ್ರೀಕರಿಸಿದ್ದು ಚಲನಚಿತ್ರವನ್ನು ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್ ನಿರ್ಮಿಸಿದೆ.ಹಾಗೂ ಆಡಿಯೊ ಹಕ್ಕುಗಳನ್ನು ಪಿಆರ್ಕೆ ಆಡಿಯೊ ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com