ಮೇ 6ಕ್ಕೆ ದರ್ಶನ್ ಅಭಿಯನದ 'ರಾಬರ್ಟ್' ಚಿತ್ರದ ಮುಹೂರ್ತ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರ ರಾಬರ್ಟ್. ಚೊಚ್ಚಲ ಚಿತ್ರ ಚೌಕ ನಂತರ ತರುಣ್ ಸುದೀರ್ ರಾಬರ್ಟ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ದರ್ಶನ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ಚಿತ್ರ ಸಾಕಷ್ಟು ಸೌಂಡ್ ಮಾಡುತ್ತಿದೆ.

Published: 25th April 2019 12:00 PM  |   Last Updated: 25th April 2019 03:08 AM   |  A+A-


Poster

ಪೋಸ್ಟರ್

Posted By : ABN ABN
Source : The New Indian Express
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರ ರಾಬರ್ಟ್.  ಚೊಚ್ಚಲ ಚಿತ್ರ ಚೌಕ ನಂತರ ತರುಣ್ ಸುದೀರ್ ಎರಡನೇ ಸಿನಿಮಾವಾಗಿ  ರಾಬರ್ಟ್  ಚಿತ್ರವನ್ನು ನಿರ್ದೇಶಿಸುತ್ತಿದ್ದು, ದರ್ಶನ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ಚಿತ್ರ ಸಾಕಷ್ಟು ಸೌಂಡ್ ಮಾಡುತ್ತಿದೆ.

ಚಿತ್ರದ ಶೀರ್ಷಿಕೆಯ ಪೋಸ್ಟರ್ ಗಳು ಈಗಾಗಲೇ ಬಿಡುಗಡೆಯಾಗಿದ್ದು, ಒಂದರಲ್ಲಿ ಈ ಕೈಗೆ ಶಬರಿ ಮುಂದೆ ಸೊಲೊದು ಗೊತ್ತು, ರಾವಣ ಮುಂದೆ ಗೊತ್ತು ಎಂಬ ಟ್ಯಾಗ್ ಲೈನ್ ನೊಂದಿಗೆ  ರಾವಣನ ಚಿತ್ರವಿದ್ದರೆ, ಎರಡನೇ ಪೋಸ್ಟರ್ ನಲ್ಲಿ ರಾಮನನ್ನು ಹೊತ್ತ ಹನುಮನ ರೂಪದಲ್ಲಿ ದರ್ಶನ್  ಕಾಣಸಿಕೊಂಡಿದ್ದಾರೆ. ಈ ಚಿತ್ರವನ್ನು ಉಮಾಪತಿ ನಿರ್ಮಿಸುತ್ತಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಇದಕ್ಕಾಗಿ ಸಿದ್ದತಾ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ.

ಮೇ 6 ರಂದು ಚಿತ್ರದ ಮುಹೂರ್ತ ನಡೆಯಲಿದ್ದು, ಅದೇ ದಿನ ಚಿತ್ರೀಕರಣವನ್ನು ಆರಂಭಿಸಲಾಗುತ್ತದೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಐದು ದಿನ ಚಿತ್ರೀಕರಣ ನಡೆಯಲಿದ್ದು, ನಂತರ ಚೆನ್ನೈ, ಹೈದ್ರಾಬಾದ್ ಹಾಗೂ ವಿಶಾಖಪಟ್ಟಣಂಗಳಲ್ಲಿ ಚಿತ್ರೀಕರಣವಾಗಲಿದೆ.

ಚಂದ್ರಮೌಳಿ ಹಾಗೂ ಕೆಎಲ್ ರಾಜಶೇಖರ್ ಕಥೆ, ಸಂಭಾಷಣೆ ಬರೆಯಲಿದ್ದು, ಸುಧಾಕರ್ ಜೈನ್ ಛಾಯಾಗ್ರಾಹಣ ಒದಗಿಸಲಿದ್ದಾರೆ. ಕೆಎಂ ಪ್ರಕಾಶ್ ಸಂಪಾದಕರಾಗಿದ್ದು, ಮೋಹನ್ ಬಿಕೆ ಕಲಾ ನಿರ್ದೇಶಕರಾಗಿದ್ದಾರೆ. ಉಳಿದ  ಪಾತ್ರಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

ಈ ಮಧ್ಯೆ ದರ್ಶನ್ ಅವರ 50 ನೇ  ಚಿತ್ರ ಕುರುಕ್ಷೇತ್ರದ 2 ಡಿ ಮತ್ತು 3 ಡಿ ಆವೃತ್ತಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ದವಾಗಿದೆ. ದರ್ಶನ್  ಅವರ ಮತ್ತೊಂದು ಒಡೆಯ ಚಿತ್ರವನ್ನು ಎಂ. ಡಿ. ಶ್ರೀಧರ್ ನಿರ್ದೇಶಿಸುತ್ತಿದ್ದು, ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಪೋಸ್ಟ್ ಪ್ರೊಢಕ್ಷನ್ ಹಂತದಲ್ಲಿದೆ
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp