ಮಾನ್ಸೂನ್‌ಗಾಗಿ ಕಾಯುತ್ತಿದ್ದಾರೆ ಯೋಗರಾಜ್ ಭಟ್ ಯಾಕಂತೀರಾ?

ಹಚ್ಚ ಹಸಿರಿನ ಥಾಣ, ಕೈಗೆಟಕುವ ಮೋಡ, ಚುಮು ಚುಮು ಚಳಿಯಲ್ಲಿ ಗಾಲಿಪಟ ಚಿತ್ರವನ್ನು ನಿರ್ಮಿಸಿ ಕನ್ನಡಿಗರಿಗೆ ಹೊಸ ಪ್ರಪಂಚವನ್ನು ಕಣ್ಮುಂದೆ ತಂದು ಬಿಟ್ಟಿದ್ದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್...

Published: 30th April 2019 12:00 PM  |   Last Updated: 30th April 2019 11:46 AM   |  A+A-


Posted By : VS VS
Source : The New Indian Express
ಹಚ್ಚ ಹಸಿರಿನ ಥಾಣ, ಕೈಗೆಟಕುವ ಮೋಡ, ಚುಮು ಚುಮು ಚಳಿಯಲ್ಲಿ ಗಾಲಿಪಟ ಚಿತ್ರವನ್ನು ನಿರ್ಮಿಸಿ ಕನ್ನಡಿಗರಿಗೆ ಹೊಸ ಪ್ರಪಂಚವನ್ನು ಕಣ್ಮುಂದೆ ತಂದು ಬಿಟ್ಟಿದ್ದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಮತ್ತೀಗ ಅದೇ ಮಾನ್ಸೂನ್‌ಗಾಗಿ ಕಾಯುತ್ತಿದ್ದಾರೆ.

ಹೌದು, ಬ್ಲಾಕ್ ಬಸ್ಟರ್ ಗಾಳಿಪಟ ಸಿಕ್ವೇಲ್ ತೆಗೆಯುವುದಾಗಿ ಈ ಹಿಂದೆಯೇ ಯೋಗರಾಜ್ ಭಟ್ ಘೋಷಿಸಿದ್ದರು. ಅದಕ್ಕಾಗಿ ಭಟ್ರು ಮಳೆಗಾಲಕ್ಕಾಗಿ ಕಾಯುತ್ತಿದ್ದಾರೆ. ಮಳೆಯಲ್ಲಿ ಚಿತ್ರದ ಕೆಲವೊಂದು ದೃಶ್ಯಗಳ ಚಿತ್ರೀಕರಣ ಮಾಡಬೇಕಿದೆ. ಇದಾದ ಬಳಿಕ ವಿದೇಶದಲ್ಲೂ ಚಿತ್ರದ ಕೆಲ ಭಾಗಗಳ ಶೂಟಿಂಗ್ ಮಾಡಲಿದ್ದಾರೆ.

ಗಾಳಿಪಟದಲ್ಲಿ ಇದ್ದ ತಾರಾಗಣವನ್ನು ಈ ಬಾರಿ ಭಟ್ರು ಮುಂದುವರೆಸುತ್ತಿಲ್ಲ. ಹಿಂದಿನ ಗಾಳಿಪಟದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ರಾಜೇಶ್ ಕೃಷ್ಣ ನಟಿಸಿದ್ದರು. ಗಾಳಿಪಟ ಸಿಕ್ವೇಲ್ ನಲ್ಲಿ ರಿಷಿ, ಶರಣ್ ಮತ್ತು ಪವನ್ ಕುಮಾರ್ ನಟಿಸಲಿದ್ದಾರೆ. 

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು ಮಹೇಶ್ ದನನ್ನವಾರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp