'ಇಂಡಿಯಾ v/s ಇಂಗ್ಲೆಂಡ್' ಚಿತ್ರದ ವಿತರಕರಾಗುತ್ತಿರುವ ನಾಗತಿಹಳ್ಳಿ ಚಂದ್ರಶೇಖರ್!

ಸ್ಯಾಂಡಲ್ ವುಡ್ ನಲ್ಲಿ  ನಿರ್ದೇಶಕ, ನಿರ್ಮಾಪಕ, ಕಥೆಗಾರ, ನಟ ಹಾಗೂ ಗಾಯಕ ಹೀಗೆ ಹಲವು ರೀತಿಯಲ್ಲಿ ಗುರುತಿಸಿಕೊಂಡಿರುವ  ನಾಗತಿಹಳ್ಳಿ ಚಂದ್ರಶೇಖರ್ ಇದೀಗ  ವಿತರಕರಾಗಿಯೂ ಒಂದು ಕೈ ನೋಡೆಬಿಡೋಣ ಅಂತಿದ್ದಾರೆ. 
'ಇಂಡಿಯಾ v/s ಇಂಗ್ಲೆಂಡ್' ಚಿತ್ರದ ಸಣ್ಣ ತುಣುಕು
'ಇಂಡಿಯಾ v/s ಇಂಗ್ಲೆಂಡ್' ಚಿತ್ರದ ಸಣ್ಣ ತುಣುಕು

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ  ನಿರ್ದೇಶಕ, ನಿರ್ಮಾಪಕ, ಕಥೆಗಾರ, ನಟ ಹಾಗೂ ಗಾಯಕ ಹೀಗೆ ಹಲವು ರೀತಿಯಲ್ಲಿ ಗುರುತಿಸಿಕೊಂಡಿರುವ  ನಾಗತಿಹಳ್ಳಿ ಚಂದ್ರಶೇಖರ್ ಇದೀಗ  ವಿತರಕರಾಗಿಯೂ ಒಂದು ಕೈ ನೋಡೆಬಿಡೋಣ ಅಂತಿದ್ದಾರೆ. 

ನಾಗತಿಹಳ್ಳಿ ಚಂದ್ರಶೇಖರ್ ಅವರೇ ನಿರ್ದೇಶಿಸಿರುವ ಇಂಡಿಯಾ v/s ಇಂಗ್ಲೆಂಡ್ ಚಿತ್ರ ಮುಂದಿನ ವರ್ಷ ಜನವರಿ 24 ರಂದು ವಿಶ್ವದಾದ್ಯಂತ ತೆರೆ ಕಾಣಲಿದ್ದು, ಈ ಚಿತ್ರದ ಮೂಲಕ ಹೊಸ ವಿತರಕರು ಆಗಲಿದ್ದಾರೆ. ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ದೊರಕಿದ ನಂತರ ಚಿತ್ರ ಬಿಡುಗಡೆಯ ಬಗ್ಗೆ ಅಧಿಕೃತವಾಗಿ ತಿಳಿಸಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ. 

ನಾಗತಿಹಳ್ಳಿ ಪ್ರಕಾರ ಹಂಚಿಕೆ ಮತ್ತೊಂದು ಕ್ರಿಯಾತ್ಮಾಕ ವಿಭಾಗವಾಗಿದೆ. ಇದೆಂದರೆ ಕೇವಲ ವ್ಯವಹಾರ ಎಂದರ್ಥವಲ್ಲಾ,  ವೃತ್ತಿಜೀವನದಲ್ಲಿ ಇದರಲ್ಲಿಯೂ ಅನುಭವ ಪಡೆದುಕೊಳ್ಳಬೇಕಾಗಿದೆ. ತನ್ನ ವೃತ್ತಿ ಜೀವನದಲ್ಲಿ ಯಾವುದೇ ವಿತರಕರ ಕಚೇರಿಯಲ್ಲಿ ಕುಳಿತುಕೊಂಡಿಲ್ಲ. ಇದರಿಂದ ನನ್ನ ಬಲವೂ ಹೆಚ್ಚಾಗಲಿದೆ. ಅದೃಷ್ಟವೆಂಬಂತೆ ನಿರ್ಮಾಪಕರಾದ ರಾಜಶ್ರೀ ಪಿಕ್ಚರ್ ನನನ್ನೂ ಪ್ರೋತ್ಸಾಹಿಸಿದ್ದಾರೆ. ಮುಂಬೈಯಲ್ಲಿ ಅವರು ಸಹಾಯ ಮಾಡಿದ್ದು, ಬೆಂಗಳೂರಿನಿಂದ ವಿತರಕ ಜವಾಬ್ದಾರಿ ಮಾಡಲು ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. 

ಇಂಡಿಯಾ v/s ಇಂಗ್ಲೆಂಡ್ ವಿಶ್ವದಾದ್ಯಂತ ಆಯ್ದ ನಗರಗಳಲ್ಲಿ ಬಿಡುಗಡೆಯಾಗಲಿದೆ. ರಾಜ್ಯಾದಾದ್ಯಂತ ಮಲ್ಟಿಪ್ಲೆಕ್ಸ್  ಹೊರತುಪಡಿಸಿದಂತೆ 100 ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ದೇಶಾದ್ಯಂತ ಬಿಡುಗಡೆಗೂ ತೀರ್ಮಾನಿಸಲಾಗಿದೆ. ಕನ್ನಡಿಗ ಪ್ರೇಕ್ಷಕರು ಹೆಚ್ಚಾಗಿರುವ ಯುಎಇ,  ದಕ್ಷಿಣ ಆಫ್ರಿಕಾದ ಎಂಟು ಕೇಂದ್ರಗಳು, ಅಮೆರಿಕಾ, ಕೆನಡಾ, ಸಿಂಗಾಪೂರ, ಹಾಂಗ್ ಕಾಂಗ್, ಸಿಯೊಲ್ ನಲ್ಲಿ ವಾರಾಂತ್ಯದ ಪ್ರದರ್ಶನವಿರುತ್ತದೆ ಎಂದು ನಾಗತಿಹಳ್ಳಿ ಹೇಳಿದರು. 

ನಾಗತಿಹಳ್ಳಿ ಪುತ್ರಿ  ಕಥೆ ಬರೆದಿರುವ ಇಂಡಿಯಾ  v/s ಇಂಗ್ಲೆಂಡ್ ಚಿತ್ರದ ಟ್ಯಾಗ್ ಲೈನ್ 'ನೋ ಕ್ರಿಕೆಟ್  ಆಗಿದೆ. ಉಭಯ ದೇಶಗಳ ನಡುವಣ ಸಾಂಸ್ಕೃತಿಕ ಹಾಗೂ ಸೈದಾಂತಿಕ ವಿಭಿನ್ನತೆಯನ್ನು ಈ ಸಿನಿಮಾ ಕಟ್ಟಿಕೊಡಲಿದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ಸತ್ಯಾ ಹೆಗ್ಡೆ ಅವರ  ಛಾಯಾಗ್ರಾಹಣವಿದೆ. ವಶಿಷ್ಠ ಸಿಂಹ  ನಾಯಕ ನಟನಾಗಿದ್ದರೆ, ಮಾನ್ವಿತ್ ಕಾಮತ್ ನಾಯಕಿ ನಟಿಯಾಗಿದ್ದಾರೆ. ಉಳಿದಂತೆ ಅನಂತ್ ನಾಗ್ ಹಾಗೂ ಸುಮಲತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com