ಯಾವುದೇ ಜವಾಬ್ದಾರಿ ಹೊರಲು ನಾನು ಸಿದ್ಧ: ರಶ್ಮಿಕಾ ಮಂದಣ್ಣ

ಕಳೆದ ಎರಡು ವರ್ಷಗಳಿಂದ ಕನ್ನಡ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಸುಮಾರು 7 ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ....

Published: 26th February 2019 12:00 PM  |   Last Updated: 26th February 2019 12:55 PM   |  A+A-


A Still from yajamana

ಯಜಮಾನ ಚಿತ್ರದ ಸ್ಟಿಲ್

Posted By : SD SD
Source : The New Indian Express
ಕಳೆದ ಎರಡು ವರ್ಷಗಳಿಂದ ಕನ್ನಡ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಸುಮಾರು 7 ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇದೇ ವೇಳೆ ತಮಿಳಿನಲ್ಲಿ ಕಾರ್ತಿ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದಾರೆ.

ಕನ್ನಡ ಮತ್ತು ತೆಲುಗು ಸಿನಿಮಾ ರಂಗಗಳಲ್ಲಿ ಯಶಸ್ಸು ಕಂಡ ನಂತರ ತಮಿಳಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದಾರೆ, ಹೀಗಾಗಿ ಎಲ್ಲಾ ರೀತಿಯ ಒತ್ತಡ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ.ಒಳ್ಳೆಯದ್ದೋ ಕೆಟ್ಟದ್ದೋ ಎಂಬ ಬಗ್ಗೆ ತಿಳಿದಿರುವುದಿಲ್ಲ, ಅದನ್ನು ತೆಗೆದುಕೊಳ್ಳುವ ಧೈರ್ಯ ನಿಮಗಿರಬೇಕು.ನಿಮಗೆ ಕಥೆ ಬಗ್ಗೆ ಆತ್ಮ ವಿಶ್ವಾಸ ಇದ್ದರೇ ನೀವು ಕಥೆ ಸೆಲೆಕ್ಟ್  ಮಾಡಿ ಎಂದು ರಶ್ಮಿಕಾ ಹೇಳಿದ್ದಾರೆ.

ಕನ್ನಡದ ಪೊಗರು ಮತ್ತು ತೆಲಗಿನ ಡಿಯರ್ ಕಾಮ್ರೆಡ್ ಸಿನಿಮಾಗಳಿಗಾಗಿ ಹೈದರಾಬಾದ್ ಮತ್ತು ಬೆಂಗಳೂರಿಗೆ ಓಡಾಡುತ್ತಿದ್ದಾರೆ, ಯಜಮಾನ ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ದರ್ಶನ್ ಜೊತೆ ನಟಿಸಿದ್ದಾರೆ.

ಸಿನಿಮಾದಲ್ಲಿ ವಿದ್ಯಾವಂತ ಯುವತಿ ಪಾತ್ರದಲ್ಲಿ ನಟಿಸಿದ್ದೇನೆ,ಇದರಲ್ಲಿ ನಾನು ತುಂಬಾ ಕಲಿತಿದ್ಗೇನೆ, ನನಗೆ ಈ ಸಿನಿಮಾದಿಂದ ತುಂಬಾ ತಾಳ್ಮೆ ಕಲಿತಿದ್ದೇನೆ.

ಕಮರ್ಷಿಯಲ್ ಸಿನಿಮಾಗಳಲ್ಲಿ  ನಟಿಸಿಲ್ಲ ಎಂಬ ಬಗ್ಗೆ ಕೊರಗಿಲ್ಲ, ಪ್ರತಿಯೊಬ್ಬ ಮನುಷ್ಯನಿಗೆ ಇಗೋ ಎಂಬುದು ಇರುತ್ತದೆ, ಬಾಕ್ಸ್ ಆಪೀಸ್ ನಲ್ಲಿ ಸಿನಿಮಾ ಹಿಟ್ ಆಗಲು ಕೇವಲ ನಾಯಕ ಟ್ಯಾಗ್ ಆಗಿರಬಾರದು, ನಾಯಕಿಯೂ ಕೂಡ ಅಷ್ಟೇ ಪ್ರಮಾಣದಲ್ಲಿ ಪ್ರಯತ್ನ ಮಾಡಬೇಕು, ನಾಯಕಿಯ ಮೇಲೂ ಅಷ್ಟೇ ಜವಾಬ್ದಾರಿ ಇರುತ್ತದೆ ಎಂದು ಹೇಳಿದ್ದಾರೆ.

ನಾಯಕ ಮತ್ತು ನಾಯಕಿ ಇಬ್ಬರು ಸಿನಿಮಾದಲ್ಲಿ ಸಮಾನವಾಗಿ ನಟಿಸಿದರೂ. ನಾಯಕಿಯರಿಗೆ ಕೇವಲ 15 ವರ್ಷ ಮಾತ್ರ ಇಂಡಸ್ಟ್ರಿಯಲ್ಲಿ ಲೈಫ್ ಇರುತ್ತದೆ., ಆದರೆ ನಾನು ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನ ಸಮಯ ಇರಬೇಕು, ಹೀಗಾಗಿ ನಾನು ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ದವಿದ್ದೇನೆ ಎಂದು ರಶ್ಮಿಕಾ ತಿಳಿಸಿದ್ದಾರೆ, 

ನಾನು ಸಿನಿಮಾರಂಗಕ್ಕೆ ಬಂದ ಮೇಲೆ ಹಲವು ರೀತಿಯ ಜನರನ್ನು ನೋಡಿದ್ದೇನೆ, ಅವರಿಂದ ಬೇರೆ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿತಿದ್ದೇನೆ ಎಂದು ತಿಳಿಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp