ರಚಿತಾ ರಾಮ್ ಮೇಲೆ ಪ್ರಿಯಾಂಕಾ ಕೆಂಡಾಮಂಡಲ: ಉಪ್ಪಿ ಪತ್ನಿಯ ಕೆಂಗಣ್ಣಿಗೆ ಕಾರಣವಾಯ್ತಾ ಹಾಡು?

ಆರ್. ಚಂದ್ರು ನಿರ್ದೇಶನದ ಉಪೇಂದ್ರ ಅಭಿನಯದ ಐ ಲವ್ ಸಿನಿಮಾದ ಮಾತನಾಡಿ ಮಾಯವಾದೆ ಹಾಡು ರಿಲೀಸ್ ಆಗಿದೆ, ಹಾಡಿನಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ...

Published: 10th June 2019 12:00 PM  |   Last Updated: 10th June 2019 01:13 AM   |  A+A-


‘Rachita Ram And Upendra

ರಚಿತಾ ರಾಮ್ ಮತ್ತು ಉಪೇಂದ್ರ

Posted By : SD SD
Source : The New Indian Express
ಆರ್. ಚಂದ್ರು ನಿರ್ದೇಶನದ ಉಪೇಂದ್ರ ಅಭಿನಯದ ಐ ಲವ್ ಸಿನಿಮಾದ  ಮಾತನಾಡಿ ಮಾಯವಾದೆ ಹಾಡು ರಿಲೀಸ್ ಆಗಿದೆ, ಹಾಡಿನಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ, 

ಹಾಡಿನ ಬಗ್ಗೆ ಉಪೇಂದ್ರ ಪತ್ನಿ ಹಾಗೂ ನಟಿ ಪ್ರಿಯಾಂಕಾ ಗರಂ ಆಗಿದ್ದಾರೆ, ಹಾಡಿನಲ್ಲಿರುವ ಹಸಿಬಿಸಿ ದೃಶ್ಯಗಳಿಂದಾಗಿ ಕೆಟ್ಟ ಭಾವನೆ ಬರುತ್ತಿದೆ, ಜೊತೆಗೆ ರಚಿತಾ ರಾಮ್ ಅನಗತ್ಯವಾಗಿ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ, ಪ್ರತಿ ಸಂದರ್ಶನಲ್ಲೂ ಅವರು ಉಪೇಂದ್ರ ಹೆಸರನ್ನು ಮಧ್ಯಕ್ಕೆ ತರುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಸಿನಿಮಾದಲ್ಲಿ ತಾವು ಯಾವ ರೀತಿಯ ಅಭಿನಯ ಮಾಡಿದ್ದಾರೆ ಎಂಬ ಬಗ್ಗೆ ರಚಿತಾ ಹೇಳಿಕೊಳ್ಳಲಿ, ಅದನ್ನು ಬಿಟ್ಟು ಎಲ್ಲದಕ್ಕೂ ಉಪೇಂದ್ರ ಅವರ ಹೆಸರನ್ನು ಏಕೆ ಹೇಳಬೇಕು ಎಂದು ಪ್ರಿಯಾಂಕಾ ಗರಂ ಆಗಿದ್ದಾರೆ, ಆಕೆಯೇನು ಸಿನಿಮಾ ಇಂಡಸ್ಟ್ರಿಗೆ ಹೊಸಬರಲ್ಲ, ನಿನ್ನೆ ಮೊನ್ನೆ ಸಿನಿಮಾ ಇಂಡಸ್ಚ್ರಿಗೆ ಬಂದವರಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಕಥೆ ಬಗ್ಗೆ ನಾನು ಕೇಳಿದ್ದೆ, ಇದೊಂದು ಕೌಟುಂಬಿಕ ಕಥಾವಸ್ತು ಎಂದು ಹೇಳಿದ್ದರ, ಆದರೆ ಸಿನಿಮಾದಲ್ಲಿ ಈ ಹಾಡು ಇರುವ ಬಗ್ಗೆ ನನಗೆ ಐಡಿಯಾ ಇರಲಿಲ್ಲ, ಟ್ರೇಲರ್ ನಲ್ಲಿ ಹಾಡನ್ನು ನೋಡುವವರೆಗೂ ನನಗೆ ಈ ಸಾಂಗ್ ಬಗ್ಗೆ ತಿಳಿದೇ ಇರಲಿಲ್ಲ, ಈ ಮೊದಲಿನ ಸಂದರ್ಶನಗಳಲ್ಲಿ ರಚಿತಾ ಈ ಹಾಡಿನ ಬಗ್ಗೆ ಸಂತಸದಿಂದ ಮಾತನಾಡಿದ್ದರು. ಉಪೇಂದ್ರ ಜೊತೆ ನಾನು ಕೂಡ ಈ ಹಾಡಿನ ಬಗ್ಗೆ ವಿಚಾರಿಸಿದ್ದೆ,  ಅದು ಸಿನಿಮಾದ ಒಂದು ಭಾಗ ಎಂದು ಹೇಳಿದ್ದರು, ಆದರೆ ರಚಿತಾ ಪದೇ ಪದೇ ಆ ಹಾಡನ್ನು ಉಪೇಂದ್ರ ನಿರ್ದೇಶಿಸಿದ್ದಾರೆ ಎಂದು ಹೇಳುತ್ತಿದ್ದಾರೆ, ನಿರ್ದೇಶಕ ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಅವರ ಹೆಸರು ಹೇಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ಉಪೇಂದ್ರ ಪ್ರಸಿದ್ದ ನಟ ಹಾಗೂ ನಿರ್ದೇಶಕ,. ಅವರ ಬಗ್ಗೆ ಮಾತನಾಡುವಾಗ ಆಕೆ ಜಾಗ್ರತೆಯಿಂದ ಇರಬೇಕು ಎಂದು ಪ್ರಿಯಾಂಕಾ ಹೇಳಿದ್ದಾರೆ. ತಮ್ಮ ಸಂದರ್ಶನದಲ್ಲಿ  ಕೇವಲ ಹಾಡಿನ ಚಿತ್ರೀಕರಣ ಹೇಗೆ ನಡೆಯಿತು ಎಂಬ ಬಗ್ಗೆ ಹೇಳಿದ್ದಾರೆ. ಸಿನಿಮಾ ಬಗ್ಗೆ ಹೇಳಲು ಬೇಕಾದಷ್ಟು ವಿಷಯಗಳಿವೆ, ಆದರೆ ರಚಿತಾ ಕೇವಲ ಹಾಡೊಂದರ ಬಗ್ಗೆ ಮಾತ್ರ ಗಮನ ಹರಿಸಿದ್ದಾರೆ. ಹಾಡಿನ ಬಗ್ಗೆ ಆಕೆಯೆ ಅಸಹನೆಯಿದ್ದಿದ್ದರೇ, ಸಾಂಗ್ ಮಾಡಲು ಒಪ್ಪಬಾರದಿತ್ತು, ಹಾಡಿನ ಚಿತ್ರೀಕರಣಕ್ಕೆ ಒಪ್ಪಿಕೊಂಡು ಈಗ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿರುವುದು ಉಪೇಂದ್ರ ಅವರ ಬಗ್ಗೆ ಕೆಟ್ಟದಾಗಿ ಚಿತ್ರಿಸಿದಂತಾಗಿದೆ ಎಂದು ಪ್ರಿಯಾಂಕಾ ಕುಪಿತಗೊಂಡಿದ್ದಾರೆ.

ಹಾಡಿನಲ್ಲಿ ಎಂತಹ ದೃಶ್ಯಗಳಿವೆ ಎಂಬುದನ್ನು ನೋಡಲು ಸಿನಿಮಾ ರಿಲೀಸ್ ಆಗುವ ವರೆಗೂ ಕಾಯಬೇಕಿದೆ, ಐ ಲವ್ ಯೂ ಸಿನಿಮಾಗಾಗಿ ನಾನು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದೇನೆ, ಚಿತ್ರದ ಮೂಹೂರ್ಥ , ಟ್ರೈಲರ್ ಬಿಡುಗಡೆ ಸಮಾರಂಭಕ್ಕೂ ನಿರ್ದೇಶಕ ಚಂದ್ರು ನನ್ನನ್ನು  ಆಹ್ವಾನಿಸಿರಲಿಲ್ಲ,  ಜೂನ್ 14 ರಂದು ಐ ಲವ್ ಯೂ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp