ನಟ ಶಿವರಾಜ್ ಕುಮಾರ್ ಗೆ ಲಂಡನ್ ನಲ್ಲಿ ಶಸ್ತ್ರ ಚಿಕಿತ್ಸೆ!

ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಅವರು ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಈ ಭಾರಿ ಶಿವಣ್ಣ ತಮ್ಮ ಹುಟ್ಟುಹಬ್ಬ ...
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಅವರು ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಈ ಭಾರಿ ಶಿವಣ್ಣ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. 
ಭುಜದ ನೋವಿನಿಂದ ಬಳಲುತ್ತಿದ್ದ ಅವರು ಲಂಡನ್‌ನಲ್ಲಿ ಭುಜದ ಶಸ್ತ್ರ ಚಿಕಿತ್ಸೆಗೊಳಗಾಗಲಿದ್ದಾರೆ.  ಬಲಭುಜದಲ್ಲಿ ನೋವು ಕಾಣಿಸಿಕೊಂಡಿದ್ದರಿಂದಾಗಿ ಜುಲೈ 9ರಂದು ಲಂಡನ್‌ಗೆ ತೆರಳಲಿರುವ ಅವರು ಸಣ್ಣ ಸರ್ಜರಿ ಮಾಡಿಸಲಿದ್ದಾರೆ.
ಜುಲೈ 12 ರಂದು ಶಿವರಾಜ್ ಕುಮಾರ್ ಅವರ 57ನೇ ವರ್ಷದ ಹುಟ್ಟುಹಬ್ಬವಿದೆ. ಈ ಬಾರಿ ಶಿವಣ್ಣ ಹುಟ್ಟು ಹಬ್ಬ ಆಚರಿಸಲು ಅವಕಾಶ ಸಿಗದ ಕಾರಣ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಒಂದು ತಿಂಗಳು ಲಂಡನ್‌ನಲ್ಲೇ ಇದ್ದು ಚಿಕಿತ್ಸೆ ಪಡೆದ ಬಳಿಕ ತವರಿಗೆ ಮರಳಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com