ನಟನೆ ಮಾಡುವುದು ಕೂಡ ಒಂದು ಥೆರಪಿಯಾಗಿದೆ, ನಟನೆಗೆ ಇಲಿದ ಮೇಲೆ, ನಾನು ರೋಗಿ ಎಂಬುದನ್ನೇ ಮರೆತಿದ್ದೇನೆ, ನನ್ನ ದೈನಂದಿನ ದಿನಚರಿಯಲ್ಲಿ ಸಂಪೂರ್ಣವಾಗಿ ಬದಲಾವಣೆಯಾಗಿದೆ, ಮೇಕ್ ಅಪ್ ಮಾಡಿಕೊಳ್ಳುವುದು, ಕ್ಯಾಮೆರಾ ಮುಂದೆ ನಿಂತುಕೊಳ್ಳಲು ಸಿದ್ದನಾಗುವುದು, ನಾನು ಈಗ ಸ್ವಲ್ಪ ಜವಾಬ್ದಾರಿ ಹೊರುತ್ತಿದ್ದೇನೆ, ಪ್ರಾಮಾಣಿಕವಾಗಿ ನಾನು ಕೆಲಸ ಮಾಡಲು ಬಯಸುತ್ತಿದ್ದೇನೆ ಎಂದು ರಾಘಣ್ಣ ಹೇಳಿದ್ದಾರೆ.