ಹ್ಯಾಟ್ರಿಕ್ ಹೀರೋಗೆ ಡಬಲ್ ಖುಷಿಯ ದಿನ: 33ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಿವಣ್ಣ ಫ್ಯಾಮಿಲಿ!

ಹ್ಯಾಟ್ರಿಕ್ ಹೋರೋ ಶಿವರಾಜ್ ಕುಮಾರ್ ಅವರಿಗಿಂದು ಡಬಲ್ ಖುಷಿ. ಕನ್ನಡ ಖ್ಯಾತ ನಟ ವರನಟ ಡಾ. ರಾಜ್ ಪುತ್ರ ಶಿವರಾಜ್ ಕುಮಾರ್ ಇಂದು 33ನೇ ವಿವಾಹ ವಾರ್ಷಿಕೋತ್ಸವ ಸಂಭ್ರವನ್ನಾಚರಿಸುತ್ತಿದ್ದಾರೆ.

Published: 19th May 2019 12:00 PM  |   Last Updated: 20th May 2019 05:54 AM   |  A+A-


33rd Anniversary Of Hatric Hero Shivarajkumar And Geetha Shivarajkumar

33ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಿವಣ್ನ ಫ್ಯಾಮಿಲಿ!

Posted By : RHN RHN
Source : Online Desk
ಬೆಂಗಳುರು: ಹ್ಯಾಟ್ರಿಕ್ ಹೋರೋ ಶಿವರಾಜ್ ಕುಮಾರ್ ಅವರಿಗಿಂದು ಡಬಲ್ ಖುಷಿ. ಕನ್ನಡ ಖ್ಯಾತ ನಟ ವರನಟ ಡಾ. ರಾಜ್ ಪುತ್ರ ಶಿವರಾಜ್ ಕುಮಾರ್ ಇಂದು 33ನೇ ವಿವಾಹ ವಾರ್ಷಿಕೋತ್ಸವ ಸಂಭ್ರವನ್ನಾಚರಿಸುತ್ತಿದ್ದಾರೆ.ಅಲ್ಲದೆ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ತಂದುಕೊಟ್ಟ ಚಿತ್ರ "ಓಂ" ಬಿಡುಗಡೆಯಾಗಿ ಇಂದಿಗೆ 24 ವರ್ಷ.

ಶಿವರಾಜ್ ಕುಮಾರ್ ಹಾಗೂ ಗಿತಾ ಶಿವರಾಜ್ ಕುಮಾರ್ ವಿವಾಹವಾಗಿದ್ದು 1986ರ ಈ ದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಿರುಪಮಾ ಹಾಗೂ ನಿವೇದಿತಾ ಎಂಬಿಬ್ಬರಲ್ಲಿ ಇದಾಗಲೇ ನಿರುಪಮಾ ವಿವಾಹವಾಗಿ ಪತಿಯ ಮನೆ ಸೇರಿದ್ದಾರೆ. ಇನ್ನು ನಿವೇದಿತಾ ವಿದ್ಯಾಭ್ಯಾಸ ಮುಂದುವರಿಸಿದ್ದು ಜತೆಗೆ ತಂದೆಯ ಶ್ರೀಮುತ್ತು ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ

ಇನ್ನು ನಿರ್ದೇಶಕ, ನಟ ಉಪೇಂದ್ರ, ಶಿವರಾಜ್ ಕುಮಾರ್ ಅವರ ವೃತ್ತಿ ಜೀವನದಲ್ಲಿ ಮಹತ್ವದ ತಿರುವು ನೀಡಿದ್ದ ಚಿತ್ರ "ಓಂ" ಇದೇ ದಿನ ತೆರೆ ಕಂಡಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದ "ಓಂ" ಅದೆಷ್ಟು ಬಾರಿ ಬಿಡುಗಡೆಯಾಗಿತ್ತೆನ್ನುವುದು ಲೆಕ್ಕವಿಲ್ಲ. ಹಾಗೆಯೇ ಎಷ್ಟೇ ಬಾರಿ ರೀ ರಿಲೀಸ್ ಆದರೂ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿತ್ತೆನ್ನುವುದು ಗಮನಾರ್ಹ.

ಶಿವಣ್ನ, ನಟಿ ಪ್ರೇಮಾ ಹಾಗೂ ಉಪೇಂದ್ರ ಅವರಿಗೆ "ಓಂ" ಚಿತ್ರದಿಂದಾಗಿ ಹೊಸದೊಂದು ಖ್ಯಾತಿಯೇ ಲಭಿಸಿತ್ತು.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp