ಸ್ಯಾಂಡಲ್ವುಡ್ ಹಿರಿಯ ನಿರ್ದೇಶಕ ಹ.ಸೂ.ರಾಜಶೇಖರ್ ವಿಧಿವಶ

ರಫ್ ಅಂಡ್ ಟಪ್ ಆಕ್ಷನ್ ಚಿತ್ರಗಳಿಗೆ ಹೆಸರಾಗಿದ್ದ ಹಿರಿಯ ನಿರ್ದೇಶಕ ಹ ಸೂ ರಾಜಶೇಖರ್ ಶನಿವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು ೬೦ ವರ್ಷ ವಯಸ್ಸಾಗಿತ್ತು.

Published: 02nd November 2019 08:45 PM  |   Last Updated: 02nd November 2019 08:45 PM   |  A+A-


HS Rajashekar

ಎಚ್ ಎಸ್ ರಾಜಶೇಖರ್

Posted By : Vishwanath S
Source : UNI

ಬೆಂಗಳೂರು: ರಫ್ ಅಂಡ್ ಟಪ್ ಆಕ್ಷನ್ ಚಿತ್ರಗಳಿಗೆ ಹೆಸರಾಗಿದ್ದ ಹಿರಿಯ ನಿರ್ದೇಶಕ ಹ ಸೂ ರಾಜಶೇಖರ್ ಶನಿವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು ೬೦ ವರ್ಷ ವಯಸ್ಸಾಗಿತ್ತು.

ಮುತ್ತಿನ ಹಾರ, ಬಣ್ಣದ ಗೆಜ್ಜೆ, ಯುಗಪುರುಷ, ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ರಾಜಶೇಖರ್, ಕರ್ಫ್ಯೂ, ಗರುಡ, ಪಾಪಿಗಳ ಲೋಕದಲ್ಲಿ, ಬಣ್ಣದ ಹೆಜ್ಜೆ, ರಫ್ ಅಂಡ್ ಟಫ್, ಇನ್ಸ್ ಪೆಕ್ಟರ್ ಜಯಸಿಂಹ ಹಾಗೂ ಇನ್ನಿತರ ಚಿತ್ರಗಳನ್ನು ಸ್ವತಃ ನಿರ್ದೇಶಿಸಿದ್ದರು.

ಕನ್ನಡವಲ್ಲದೆ ತುಳು ಸಿನೆಮಾಗಳಿಗೆ ಕೂಡ ಆಕ್ಷನ್ ಕಟ್ ಹೇಳಿದ್ದರು.   ಚಾಮರಾಜನಗರ ತಾಲೂಕಿನ ಹರಪನಹಳ್ಳಿ ಅವರ ಹುಟ್ಟೂರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನ ಕತ್ತರಿಗುಪ್ಪೆಯಲ್ಲಿ ವಾಸವಾಗಿದ್ದರು.

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp