ಆಂಟಿ ಎಂದಿದ್ದಕ್ಕೆ ಮಗುವಿಗೆ ಅವಾಚ್ಯ ಶಬ್ಧ ಬಳಕೆ: ಬಾಲಿವುಡ್ ನಟಿಯ ಬೆವರಿಳಿಸಿದ ನೆಟಿಗರು!

ಏನು ಅರಿಯದ 4 ವರ್ಷದ ಮಗುವೊಂದು ಬಾಲಿವುಡ್ ನಟಿಯನ್ನು ಆಂಟಿ ಎಂದು ಕರೆದಿದ್ದು ಇದಕ್ಕೆ ಆಕ್ರೋಶಗೊಂಡ ನಟಿ ಮಗುವಿನ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಿರುವುದು ನೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಸ್ವರಾ ಭಾಸ್ಕರ್
ಸ್ವರಾ ಭಾಸ್ಕರ್

ಮುಂಬೈ: ಏನು ಅರಿಯದ 4 ವರ್ಷದ ಮಗುವೊಂದು ಬಾಲಿವುಡ್ ನಟಿಯನ್ನು ಆಂಟಿ ಎಂದು ಕರೆದಿದ್ದು ಇದಕ್ಕೆ ಆಕ್ರೋಶಗೊಂಡ ನಟಿ ಮಗುವಿನ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಿರುವುದು ನೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸಂದರ್ಶನವೊಂದರಲ್ಲಿ ತಾನು ಸಿನಿಮಾ ರಂಗಕ್ಕೆ ಕಾಲಿಟ್ಟ ಸಮಯ. ಜಾಹೀರಾತಿನಲ್ಲಿ ನಟಿಸಲು ಶೂಟಿಂಗ್ ಗಾಗಿ ಹೋಗುತ್ತಿದ್ದಾಗ ನಾಲ್ಕು ವರ್ಷದ ಬಾಲಕನೊಬ್ಬ ನನ್ನನ್ನು ಆಂಟಿ ಎಂದು ಕರೆದಿದ್ದು ನನ್ನ ಮೈ ಉರಿಯುವಂತೆ ಮಾಡಿದ್ದು ಎಂದು ಹೇಳಿದ್ದರು. 

ಅಲ್ಲದೆ ಬಾಲಕನ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಿದ್ದಾಗಿ ಸ್ವತಃ ನಟಿಯೇ ಹೇಳಿಕೊಂಡಿದ್ದು ಇದಕ್ಕೆ ಆಕ್ರೋಶಗೊಂಡಿರುವ ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com