'ಕೆಜಿಎಫ್ -2' ಚಿತ್ರದ ಥ್ರಿಲ್ಲಿಂಗ್ ಬಿಜಿಎಂ ಹಂಚಿಕೊಂಡ ನಿರ್ದೇಶಕ ಪ್ರಶಾಂತ್ ನೀಲ್!

ಸ್ಯಾಂಡಲ್ ವುಡ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸಿದ ಕೆಜಿಎಫ್ ಚಾಪ್ಟರ್ 1 ಮುಂದುವರೆದ ಭಾಗ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗಿದೆ.

Published: 08th November 2019 11:53 AM  |   Last Updated: 08th November 2019 12:06 PM   |  A+A-


CollectionPhoto1

ಸಂಗ್ರಹ ಚಿತ್ರ

Posted By : Nagaraja AB
Source : Online Desk

ಬೆಂಗಳೂರು:  ಸ್ಯಾಂಡಲ್ ವುಡ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸಿದ ಕೆಜಿಎಫ್ ಚಾಪ್ಟರ್ 1 ಮುಂದುವರೆದ ಭಾಗ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗಿದೆ.

ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿನಿ ರಸಿಕರಲ್ಲಿ ದುಪ್ಪಟ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಈ ಮಧ್ಯೆ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ವೀಟರ್ ಖಾತೆಯಲ್ಲಿ ಕೆಜಿಎಫ್ ಚಾಪ್ಟರ್ 2ರ ಹಾಡೊಂದರ ಸಣ್ಣ ಬಿಜೆಎಂ ತುಣುಕೊಂದನ್ನು ಹಂಚಿಕೊಂಡಿದ್ದಾರೆ.

 

ರವಿಬಸ್ರೂರು ಅವರ ಸಂಯೋಜನೆಯ ಭೀಕರ ಇವರ ಭೋರ್ಗರ ಅನ್ನುವ ಪದಗಳನ್ನು ಒಳಗೊಂಡಿರುವ ಈ ಬಿಜಿಎಂ  ಕೇಳಗರನ್ನು ರೋಮಾಂಚನಗೊಳಿಸುತ್ತದೆ. ಈಗಾಗಲೇ ಈ ಬಿಜೆಪಿಎಂನ್ನು  ಸುಮಾರು 35 ಸಾವಿರ ವೀಕ್ಷಿಸಿದ್ದು, ಏಳೂವರೆ ಸಾವಿರ ಜನರ ಲೈಕ್ ಮಾಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp