ಶಿವಣ್ಣ ಅಭಿಮಾನಿಗಳಿಗೆ ಸಿಹಿ ಸುದ್ದಿ: 'ಆಯುಷ್ಮಾನ್‌ಭವ' ನ. ೧೫ರಂದು ತೆರೆಗೆ

ಅಂತೂ ಇಂತೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಪಿ ವಾಸು ನಿರ್ದೇಶನದ 'ಆಯುಷ್ಮಾನ್‌ಭವ’ ಚಿತ್ರ ಮುಂದಿನ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

Published: 08th November 2019 03:41 PM  |   Last Updated: 08th November 2019 03:41 PM   |  A+A-


Shivarajkumar

ಸಂಗ್ರಹ ಚಿತ್ರ

Posted By : Lingaraj Badiger
Source : UNI

ಬೆಂಗಳೂರು: ಅಂತೂ ಇಂತೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಪಿ ವಾಸು ನಿರ್ದೇಶನದ 'ಆಯುಷ್ಮಾನ್‌ಭವ’ ಚಿತ್ರ ಮುಂದಿನ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ನವೆಂಬರ್ ೧ರಂದೇ ಚಿತ್ರ ಬಿಡುಗಡೆಗೊಳಿಸಲು ನಿರ್ಮಾಪಕ ದ್ವಾರಕೀಶ್ ಪ್ರಯತ್ನಿಸಿದ್ದರು. ಖಂಡಿತಾ ಅಂದೇ ಬಿಡುಗಡೆಗೆ ಅವಕಾಶ ಸಿಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ದಿನಾಂಕವನ್ನೂ ಘೋಷಿಸಿದ್ದರು. ಆದರೆ ಸೆನ್ಸಾರ್ ಅರ್ಹತಾ ಪತ್ರ ಕೈ ಸೇರದ ಕಾರಣ ಚಿತ್ರ ಬಿಡುಗಡೆ ವಿಳಂಬವಾಗಿತ್ತು.

ನವೆಂಬರ್ ೧ ರಂದು ಬೆಳ್ಳಿಪರದೆಯ ಮೇಲೆ ಶಿವಣ್ಣನನ್ನು ನೋಡಬೇಕೆಂದು ಕಾದುಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು ಸುಳ್ಳಲ್ಲ. ಅಂತೂ ಇಂತೂ ಸೆನ್ಸಾರ್ ಯು/ಎ ಅರ್ಹತಾ ಪತ್ರ ನೀಡಿದ್ದು, ನ. ೧೫ರಂದು ಬೆಂಗಳೂರಿನ ಸಂತೋಷ್, ಪ್ರಸನ್ನ ಸೇರಿದಂತೆ ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಆಯುಷ್ಮಾನ್‌ಭವ’ ಬಿಡುಗಡೆಯಾಗಲಿದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp