'ರಂಗನಾಯಕಿ’ಗೆ ನಿರ್ಭಯಾ ಸ್ಫೂರ್ತಿ : ದಯಾಳ್ ಪದ್ಮನಾಭನ್

ದೇಶ ವಿದೇಶಗಳ ಜನರನ್ನು ಬೆಚ್ಚಿಬೀಳಿಸಿದ ದೆಹಲಿಯ ನಿರ್ಭಯಾ ಪ್ರಕರಣವೇ ತಮ್ಮ ’ರಂಗನಾಯಕಿ’ ಚಿತ್ರಕ್ಕೆ ಸ್ಫೂರ್ತಿ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ.

Published: 26th November 2019 12:14 PM  |   Last Updated: 26th November 2019 12:14 PM   |  A+A-


Dayal Padmanabhan

ದಯಾಳ್ ಪದ್ಮನಾಭನ್

Posted By : shilpa
Source : UNI

ಪಣಜಿ: ದೇಶ ವಿದೇಶಗಳ ಜನರನ್ನು ಬೆಚ್ಚಿಬೀಳಿಸಿದ ದೆಹಲಿಯ ನಿರ್ಭಯಾ ಪ್ರಕರಣವೇ ತಮ್ಮ ’ರಂಗನಾಯಕಿ’ ಚಿತ್ರಕ್ಕೆ ಸ್ಫೂರ್ತಿ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ.

ಗೋವಾದಲ್ಲಿ ನಡೆಯುತ್ತಿರುವ ೫೦ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಮುಕರ ದೌರ್ಜನ್ಯಕ್ಕೆ ಗುರಿಯಾದ ನಿರ್ಭಯಾ ಒಂದು ವೇಳೆ ಬದುಕಿದ್ದರೆ ಏನಾಗುತ್ತಿತ್ತು? ಆಕೆಯನ್ನು ಸಮಾಜ ಹೇಗೆ ಕಾಣುತ್ತಿತ್ತು? ಅದನ್ನು ಆಕೆ ಹೇಗೆ ಎದುರಿಸುತ್ತಿದ್ದಳು ಎಂಬೆಲ್ಲ ಕಲ್ಪನೆಯೊಂದಿಗೆ ’ರಂಗನಾಯಕಿ’ ಚಿತ್ರಕಥೆ ಹೆಣೆಯಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಖ್ಯಾತ ನಿರ್ದೇಶಕ ಪುಟ್ಟಣ ಕಣಗಾಲ್ ಸಾರಥ್ಯದಲ್ಲಿ ೧೯೮೧ರಲ್ಲಿ ’ರಂಗನಾಯಕಿ’ ಚಿತ್ರ ತೆರೆಕಂಡಿತ್ತು ಚಿತ್ರ ತೀವ್ರ ಪ್ರಭಾವ ಬೀರಿದ್ದರಿಂದ ಮತ್ತೆ ಅದೇ ಶೀರ್ಷಿಕೆಯಲ್ಲಿ ಚಿತ್ರ ನಿರ್ಮಿಸಿದ್ದು, ಅದನ್ನು ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸಿರುವುದಾಗಿ ತಿಳಿಸಿದ್ದಾರೆ


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp