IFFI Goa 2019: ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾದ 'ರಂಗನಾಯಕಿ'!

ಇದು ಕನ್ನಡ ಚಿತ್ರೋದ್ಯಮಕ್ಕೆ ಹೆಮ್ಮೆಯ ಸಂಗತಿ. ದಯಾಳ್ ಪದ್ಮನಾಭನ್ ನಿರ್ದೇಶನದ ಶೀಘ್ರವೇ ತೆರೆಗೆ ಬರಲು ಸಿದ್ದವಾಗಿರುವ "ರಂಗನಾಯಕಿ" 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ "ಪನೋರಮಾ" ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಫೀಚರ್​ ಫಿಲ್ಮ್ ಆಗಿ ಆಯ್ಕೆಯಾಗಿದೆ.
ರಂಗನಾಯಕಿ

ನವೆಂಬರ್​ 20ರಿಂದ 28ರವರೆಗೆ ಗೋವಾದ ಪಣಜಿಯಲ್ಲಿ ನಡೆಯುವ ಅಂತರಾಷ್ಟ್ರೀಯ ಯ ಚಲನಚಿತ್ರೋತ್ಸವದಲ್ಲಿ 76 ದೇಶಗಳ 200 ಅತ್ಯುತ್ತಮ ಚಿತ್ರಗಳು ಪ್ರದರ್ಶನ ಕಾಣುತ್ತಿದ್ದು ಕನ್ನಡದ "ರಂಗನಾಯಕಿ" ಸಹ ಅವುಗಳಲ್ಲಿ ಒಂದೆನಿಸಿದೆ.

ಈ ಸಂಬಂಧ ಚಿತ್ರ ನಿರ್ದೇಶಕ ದಯಾಳ್ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ತಮ್ಮ ತಂಡದೊಡನೆ ಸಂತಸವನ್ನು ಹಂಚಿಕೊಂಡಿದ್ದಾರೆ.

"ರಂಗನಾಯಕಿ" ಚಿತ್ರವನ್ನು  ಎಸ್​.ವಿ. ನಾರಾಯಣ್  ನಿರ್ಮಿಸಿದ್ದು ಅದಿತಿ ಪ್ರಭುದೇವ ಪ್ರಧಾನ ಭೂಮಿಕೆಯಲ್ಲಿದ್ದಾರೆ., ಶ್ರೀನಿ ಹಾಗೂ ತ್ರಿವಿಕ್ರಮ್, ಸಿಹಿಕಹಿ ಚಂದ್ರು, ಸುಂದರ ರಾಜ್‌ ಸೇರಿದಂತೆ ಹಲವು ಹಿರಿ ಕಿರಿಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದು , ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ನವೀನ್‌ ಕೃಷ್ಣ ಸಂಭಾಷಣೆ,  ಬಿ. ರಾಕೇಶ್‌ ಛಾಯಾಗ್ರಹಣ, ಸುನಿಲ್‌ ಕಶ್ಯಪ್‌ ಸಂಕಲನ ಒದಗಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com