'ರಶ್ಮಿಕಾ ಮಂದಣ್ಣ ನಿರ್ಗಮನ ಬಗ್ಗೆ ವಿಷಾದವಿಲ್ಲ'- ಗೌತಮ್ ಅಯ್ಯರ್ 

ಗೌತಮ್ ಅಯ್ಯರ್ ನಿರ್ದೇಶನದ  'ವೃತ' ಚಿತ್ರ ಇಂದು ಬಿಡುಗಡೆಯಾಗಿದೆ.ಮೊದಲಿಗೆ  ಈ ಚಿತ್ರದಲ್ಲಿ ರಶ್ಮಿಕ ಮಂದಣ್ಣ ನಟಿಸಲಿದ್ದಾರೆ ಅನ್ನುವ ಸುದ್ದಿಯಿಂದ  ಚಿತ್ರ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ, ತದ ನಂತರ ರಶ್ಮಿಕಾ ಮಂದಣ್ಣ ಆ ಚಿತ್ರದಿಂದ ಹೊರಬಂದು, ನಿತ್ಯಾ ಶ್ರೀ ನಾಯಕಿಯಾಗಿ ಅಭಿನಯಿಸಿದ್ದಾರೆ.
ವೃತ ಪೋಸ್ಟರ್
ವೃತ ಪೋಸ್ಟರ್

ಗೌತಮ್ ಅಯ್ಯರ್ ನಿರ್ದೇಶನದ  'ವೃತ' ಚಿತ್ರ ಇಂದು ಬಿಡುಗಡೆಯಾಗಿದೆ.ಮೊದಲಿಗೆ  ಈ ಚಿತ್ರದಲ್ಲಿ ರಶ್ಮಿಕ ಮಂದಣ್ಣ ನಟಿಸಲಿದ್ದಾರೆ ಅನ್ನುವ ಸುದ್ದಿಯಿಂದ  ಚಿತ್ರ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ, ತದ ನಂತರ ರಶ್ಮಿಕಾ ಮಂದಣ್ಣ ಆ ಚಿತ್ರದಿಂದ ಹೊರಬಂದು, ನಿತ್ಯಾ ಶ್ರೀ ನಾಯಕಿಯಾಗಿ ಅಭಿನಯಿಸಿದ್ದಾರೆ.

 ಫಿಲಂ ಇನ್ಸಿಟ್ಯೂಟ್ ನಲ್ಲಿ ವ್ಯಾಸಂಗ ಮಾಡುವಾಗ ಚಿತ್ರ ಮಾಡುವ ಆಲೋಚನೆ ಹೊಳೆದಿತ್ತು.ಅನೇಕ ಮಹಿಳೆಯರನ್ನು  ಭೇಟಿಯಾಗಿ ಕೆಲ ವಿಷಯಗಳನ್ನು ಹಂಚಿಕೊಂಡಾಗ ಪುರುಷರಿಗಿಂತ ಅವರ ಆಲೋಚನೆ ಭಿನ್ನವಾಗಿತ್ತು. ಅವರೊಂದಿಗೆ ಮಾತನಾಡುತ್ತಾ ಇಂದಿರಾ ಪಾತ್ರ ಮೂಡಿದ್ದಾಗಿ ಹೇಳಿದ್ದಾರೆ.

ಚಾರ್ಲಿ ಸಿನಿಮಾದ ವೇಳೆ ನಿರ್ದೇಶಕ ಕಿರಣ್ ರಾಜ್ ಅವರಿಗೆ ಸಹಾಯಕಾಗಿ ಕಾರ್ಯನಿರ್ವಹಿಸುತ್ತಿದ್ದಾಗ ವೃತ ಕಥೆ ದೊರೆಯಿತು. ಇದೊಂದು ಕ್ರೈಮ್ ಥ್ಲಿಲ್ಲರ್ ಸಿನಿಮಾವಾಗಿರುವುದಾಗಿ ಗೌತಮ್ ತಿಳಿಸಿದ್ದಾರೆ.

ಚಿತ್ರದ ಮೊದಲ ಸ್ಟಿಲ್ ಬಿಡುಗಡೆಯಾದ ನಂತರ ರಶ್ಮಿಕಾ ಮಂದಣ್ಣ ಡೇಟ್   ಸಂಘರ್ಷದಿಂದ ನಿರ್ಗಮಿಸಿದರು. ಅವರ ಜಾಗಕ್ಕೆ ಯಾರನ್ನು ತರುವುದು, ಹೇಗೆ ಚಿತ್ರ ಮಾಡೋದು ಎಂಬ ಯೋಚನೆಯಿತ್ತು.ಕೊನೆಗೆ ಹುಡುಕಾಟದ ನಂತರ ನಿತ್ಯಾಶ್ರೀ ಸಿಕ್ಕರು. ಈ ಚಿತ್ರದಿಂದ ರಶ್ಮಿಕಾ ಮಂದಣ್ಣ ನಿರ್ಗಮಿಸಿದ ಬಗ್ಗೆ ವಿಷಾದವಿಲ್ಲ ಎಂದು ಗೌತಮ್ ಅಯ್ಯರ್ ಹೇಳಿದ್ದಾರೆ

ನಿತ್ಯಾಶ್ರೀ ತಮ್ಮ ಕೆಲಸನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಆಕೆಯನ್ನು ಹುಡುಕಿದ್ದಕ್ಕೆ ಸಂತೋಷವಾಗುತ್ತಿದೆ. ವೃತ್ತ ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರತಿಯೊಬ್ಬ ಸಾಮಾನ್ಯ ಜನರಿಗೂ ಸಂಬಂಧಿಸಿದ್ದಾಗಿದೆ ನಿತ್ಯಾಶ್ರೀ ಅವರೊಂದಿಗೆ ಪ್ರಕಾಶ್ ಬೆಳವಾಡಿ, ಸುಧಾರಾಣಿ, ತರುಣ್ ಸುಧೀರ್, ರವಿ ಸೀತಾರಾಮ್, ಮತ್ತು ಗಿರೀಶ್ ಜಟ್ಟಿ ಅತ್ಯುತ್ತಮ ರೀತಿಯಲ್ಲಿ ನಟಿಸಿರುವುದಾಗಿ ಗೌತಮ್ ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಎ ವಸಂತ್ ಸಂಗೀತ ಸಂಯೋಜಿಸಿದ್ದು, ಔದಿತ್ಯ ವೆಂಕಟೇಶ್ ಅವರ ಛಾಯಾಗ್ರಹಣವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com