ದ್ವಿಭಾಷೆಯಲ್ಲಿ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. 
ಧ್ರುವ ಸರ್ಜಾ
ಧ್ರುವ ಸರ್ಜಾ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. 

ಪೊಗರು ಚಿತ್ರಕ್ಕೆ ದೊಡ್ಡ ಮಾರುಕಟ್ಟೆ ಸೃಷ್ಟಿಸುವ ಸಲುವಾಗಿ ನಿರ್ದೇಶಕರ ನಂದ ಕಿಶೋರ್ ದ್ವಿಭಾಷೆಯಲ್ಲಿ ಚಿತ್ರವನ್ನು ರೆಡಿ ಮಾಡಿದ್ದಾರೆ. ಟಾಲಿವುಡ್ ಅಭಿಮಾನಿಗಳು ಮಾಸ್ ಚಿತ್ರವನ್ನು ಹೆಚ್ಚು ಇಷ್ಟ ಪಡುವುದರಿಂದ ತೆಲುಗಿನಲ್ಲೂ ಈ ಚಿತ್ರದ ಬಿಡುಗಡೆಗೆ ಚಿತ್ರ ತಂಡ ಮುಂದಾಗಿದೆ. 

ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆಗೆ ಚಿತ್ರ ತಂಡ ತೀರ್ಮಾನಿಸಿದೆ. ಅದರಂತೆ ಅಕ್ಟೋಬರ್ 24ರಂದು ವಿಶೇಷ ಡೈಲಾಗ್ ಗಳ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗುತ್ತದೆ. ಚಿತ್ರಕ್ಕೆ ಬಿಕೆ ಗಂಗಾಧರ್ ಬಂಡವಾಳ ಹೂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com