'ಮಾತೃಭಾಷೆ ಬಿಟ್ಟೋರು ಮೂರು ಬಿಟ್ಟೋರು': ಪೊಗರು ಪಂಚಿಂಗ್ ಡೈಲಾಗ್ ಗೆ ಅಭಿಮಾನಿಗಳು ಫಿದಾ!

ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಚಿತ್ರದ ಡೈಲಾಗ್ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
ಧ್ರುವ ಸರ್ಜಾ
ಧ್ರುವ ಸರ್ಜಾ

ಬೆಂಗಳೂರು: ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಚಿತ್ರದ ಡೈಲಾಗ್ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

ಹನುಮನ ವಿಗ್ರಹ ಹಾಗೂ ಕಾರೊಂದು ಕಟ್ಟಡಕ್ಕೆ ಅಪ್ಪಳಿಸುವ ದೃಶ್ಯದೊಂದಿಗೆ ಆರಂಭವಾಗುವ ಈ ಟ್ರೈಲರ್ ನಲ್ಲಿ ಧ್ರುವ ಸರ್ಜಾ ಅವರ ಭರ್ಜರಿ ಆಕ್ಷನ್ ಹಾಗೂ ಡೈಲಾಗ್ ಡೆಲಿವರಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಅದರಲ್ಲೂ ಮಾತೃ ಭಾಷೆ ಬಿಟ್ಟೋರು ಮೂರು ಬಿಟ್ಟೋರು ಅನ್ನುವ ಡೈಲಾಗ್ ರಶ್ಮೀಕಾಗೆ ಧ್ರುವ ಸರ್ಜಾ ನೇರವಾಗಿ ಹೇಳಿದ ಹಾಗೆ ಇದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

3 ನಿಮಿಷ 40 ನಿಮಿಷದ ಈ ಡೈಲಾಗ್ ಟ್ರೈಲರ್ , ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದರ್ಶನ್, ಯಶ್ ಅಭಿಮಾನಿಗಳ ಮನ ಸೆಳೆದಿದ್ದು, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com