'ಪಂಥ'ದಲ್ಲಿ ಒಂದಾದ ರಚಿತಾ, ವಸಿಷ್ಠ ಸಿಂಹ ಜೋಡಿ

ಗೂಗಲ್ ಸಿನಿಮಾ ಬಳಿಕ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅವರು ಪಂಥ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ನಟ ವಸಿಷ್ಟ ಸಿಂಹ ಜೋಡಿಗಳಾಗಿ ನಟಿಸುತ್ತಿದ್ದಾರೆ. 

Published: 26th October 2019 12:51 PM  |   Last Updated: 26th October 2019 12:51 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಗೂಗಲ್ ಸಿನಿಮಾ ಬಳಿಕ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅವರು ಪಂಥ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ನಟ ವಸಿಷ್ಟ ಸಿಂಹ ಜೋಡಿಗಳಾಗಿ ನಟಿಸುತ್ತಿದ್ದಾರೆ. 

ಈಗಾಗಲೇ ವಸಿಷ್ಠ ಅಭಿನಯದ ಇಂಡಿಯಾ ವರ್ಸಸ್ ಇಂಗ್ಲೆಂಡ್, ಕಾಲಚಕ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಹೊಸ ಚಿತ್ರ ಪಂಥಕ್ಕೆ ವಸಿಷ್ಠ ಒಪ್ಪಿಕೊಂಡಿದ್ದಾರೆ. 

ಇದು ಮೈಂಡ್ ಗೇಮ್ ಕುರಿತ ಚಿತ್ರವಾಗಿದ್ದು, ಪಕ್ಕ ಮನರಂಜನಾತ್ಮಕವಾಗಿ ಮೂಡಿಬರಲಿದೆ. ವಸಿಷ್ಠ ಸಿಂಹ ಹಾಗೂ ರಚಿತಾ ರಾಮ್ ಜೊತೆಗೆ ಮೊದಲನೇ ಬಾರಿಗೆ ಕೆಲಸ ಮಾಡುತ್ತಿದ್ದು, ಉಳಿದಂತೆ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ನಟಿಸುತ್ತಿದ್ದಾರೆಂದು ನಾಗೇಂದ್ರ ಪ್ರಸಾದ್ ಅವರು ಹೇಳಿದ್ದಾರೆ. 

ಚಿತ್ರ ಉತ್ಸವ್ ಮೂವೀಸ್ ಬ್ಯಾನರ್'ನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ, ಸಾಹಿತ್ಯ ಸಂಗೀತವನ್ನು ನಾಗೇಂದ್ರ ಪ್ರಸಾದ್ ಅವರೇ ನೀಡುತ್ತಿದ್ದಾರೆ.ನವೆಂಬರ್ ಮೊದಲನೇ ವಾರದಲ್ಲಿ ಚಿತ್ರ ಸೆಟ್ಟೇರುತ್ತಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp