ತುಳು ಚಿತ್ರೋದ್ಯಮ ನನಗೆ ಅವಕಾಶದ ಹೆಬ್ಬಾಗಿಲು ತೆರೆಯಿತು: ಆರಾಧ್ಯ ಶೆಟ್ಟಿ

ಇತ್ತೀಚೆಗೆ ತುಳು ಚಿತ್ರೋದ್ಯಮ ಅತ್ಯುತ್ತಮ ಗುಣಮಟ್ಟದ ಚಿತ್ರಗಳೊಂದಿಗೆ ಹೆಸರು ಮಾಡುತ್ತಿದೆ. ಅಷ್ಟೇ ಅಲ್ಲದೆ ಸಾಕಷ್ಟು ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದೆ. ಹೀಗೆ ತುಳು ಚಿತ್ರಗಳ ಮೂಲಕ ಹೊಸ ಅಲೆ ಸೃಷ್ಟಿಸಿರುವ ಯುವ ಪ್ರತಿಭೆಗಳ ಪೈಕಿ ಆರಾಧ್ಯ ಶೆಟ್ಟಿ ಕೂಡ  ಒಬ್ಬರು.
ಆರಾಧ್ಯ  ಶೆಟ್ಟಿ
ಆರಾಧ್ಯ ಶೆಟ್ಟಿ

ಇತ್ತೀಚೆಗೆ ತುಳು ಚಿತ್ರೋದ್ಯಮ ಅತ್ಯುತ್ತಮ ಗುಣಮಟ್ಟದ ಚಿತ್ರಗಳೊಂದಿಗೆ ಹೆಸರು ಮಾಡುತ್ತಿದೆ. ಅಷ್ಟೇ ಅಲ್ಲದೆ ಸಾಕಷ್ಟು ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದೆ. ಹೀಗೆ ತುಳು ಚಿತ್ರಗಳ ಮೂಲಕ ಹೊಸ ಅಲೆ ಸೃಷ್ಟಿಸಿರುವ ಯುವ ಪ್ರತಿಭೆಗಳ ಪೈಕಿ ಆರಾಧ್ಯ  ಶೆಟ್ಟಿ ಕೂಡ  ಒಬ್ಬರು.

ಕನ್ನಡದ "ನಿಷ್ಯಬ್ದ-2" ನಲ್ಲಿ ಅಭಿನಯಿಸಿರುವ ಆರಾದ್ಯಈಗ ದರ್ಶನ್ ಅಭಿನಯದ "ಒಡೆಯ" ನಲ್ಲಿ ಸಹ ಪಾತ್ರವಹಿಸುವ ನಿರೀಕ್ಷೆ ಇದೆ. ಇದರಲ್ಲಿ ಅವರು ಪ್ರಮುಖ ಪಾತ್ರ ಮಾಡಲಿದ್ದು ನಟಿ ಪ್ರಸ್ತುತ .ತನ್ನ ಮೂರನೆಯ ತುಳು ಚಿತ್ರ ದಿ ಲಾಸ್ಟ್ ಬೆಂಚ್  ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.ಅಲ್ಲದೆ ತಮಿಳಿನ ಚಿತ್ರವೊಂದರಲ್ಲಿ ಸಹ ತನ್ನ ಹೆಜ್ಜೆಗುರುತು ಮೂಡಿಸಲು ಸಜ್ಜಾಗುತ್ತಿದ್ದಾರೆ.

“ತುಳು ಚಲನಚಿತ್ರೋದ್ಯಮ ಹಿಂದೆಲ್ಲಾ ಗುರುತಿಸಲ್ಪಡುವ ಉದ್ಯಮವಾಗಿರಲಿಲ್ಲ. , ಆದರೆ ಇಂದು ಪ್ರಪಂಚದಾದ್ಯಂತ ಜನರು ಈ ಭಾಷೆಯಲ್ಲಿ ಮಾಡಿದ ಚಲನಚಿತ್ರಗಳನ್ನು ನೋಡಲು ಕಾಯುತ್ತಿದ್ದಾರೆ. ನಟನೆಯನ್ನು ವೃತ್ತಿಯಾಗಿ ಮುಂದುವರಿಸಲು ಬಯಸುವ ನನ್ನಂತಹ ಯುವ ನಟರಿಗೆ ಇದು ಉತ್ತಮ ವೇದಿಕೆಯಾಗಿದೆ. ತುಳುವಿನಲ್ಲಿ ನನ್ನ ಅಭಿನಯವೇ ನನಗೆ ಕನ್ನಡ ಚಿತ್ರರಂಗದಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಟ್ಟಿದೆ." ನಟಿ ಹೇಳಿದ್ದಾರೆ.

ಮೂಲತಃಅ ಫ್ಯಾಶನ್ ಡಿಸೈನರ್ ಆಗಿದ್ದ ಆರಾದ್ಯ ತನ್ನ ಚಿತ್ರಕ್ಕೆ ತಾವೇ ವೇಷಭೂಷಣಗಳನ್ನು ವಿನ್ಯಾಸಗೊಳಿಸಿಕೊಳ್ಳುತ್ತಾರೆ. "ನನ್ನ ನೃತ್ಯ ಕೌಶಲ್ಯಗಳು ಸಹ ಒಂದು ಪ್ಲಸ್ ಪಾಯಿಂಟ್ ಆಗಿವೆ" ಎಂದು ಆರಾಧ್ಯ  ಹೇಳುತ್ತಾರೆ, ಅವರು ಈಗ ವಿವಿಧ ಭಾಷೆಗಳಚಲನಚಿತ್ರಗಳಲ್ಲಿ ನಟಿಸಲು ಬಯಸುತ್ತಾರೆ. "ಹೊಸಬರಾಗಿ, ನಾವು ಅಂತಿಮವಾಗಿ ಒಂದು ಉದ್ಯಮದಲ್ಲಿ ನೆಲೆಗೊಳ್ಳುವ ಮೊದಲು, ವಿವಿಧ ಭಾಗಗಳ ವಿವಿಧ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳಲು  ನಮಗೆ ಅವಕಾಶವಿದೆ" ಎಂದು ಅವರು ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com