ಕನ್ನಡ ಚಿತ್ರಗಳ ಒಳಿತಿಗಾಗಿ ಟಿಕೆಟ್ ದರ ನಿಯಂತ್ರಣ ಅಗತ್ಯ: ರಾಕ್‍ಲೈನ್ ವೆಂಕಟೇಶ್

ತೆರೆಕಂಡ ದಿನದಿಂದ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ "ಮುನಿರತ್ನ ಕುರುಕ್ಷೇತ್ರ" ಮೇಲೆ ಇದೀಗ ಪರಭಾಷಾ ಚಿತ್ರವೊಂದು ಕರಿನೆರಳನ್ನು ಚಾಚಿದೆ. 
ಮುನಿರತ್ನ ಕುರುಕ್ಷೇತ್ರ ಹಾಗೂ ಸಾಹೋ ಚಿತ್ರದ ದೃಶ್ಯಗಳು
ಮುನಿರತ್ನ ಕುರುಕ್ಷೇತ್ರ ಹಾಗೂ ಸಾಹೋ ಚಿತ್ರದ ದೃಶ್ಯಗಳು

ತೆರೆಕಂಡ ದಿನದಿಂದ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ "ಮುನಿರತ್ನ ಕುರುಕ್ಷೇತ್ರ" ಮೇಲೆ ಇದೀಗ ಪರಭಾಷಾ ಚಿತ್ರವೊಂದು ಕರಿನೆರಳನ್ನು ಚಾಚಿದೆ. ಇಷ್ಟಕ್ಕೂ ಸ್ಯಾಂಡಲ್ ವುಡ್ ಚಿತ್ರಗಳ ಪ್ರದರ್ಶನಕ್ಕೆ ಪರಭಾಷಾ ಚಿತ್ರಗಳು ಅಡ್ಡಿಯಾಗಿರುವುದು ಇದು ಮೊದಲೇನಲ್ಲ. ಆದರೆ ಈ ಬಾರಿ ಬಹುಕೋಟಿ ಬಜೆಟ್ ನ "ಮುನಿರತ್ನ ಕುರುಕ್ಷೇತ್ರ" ಚಿತ್ರಕ್ಕೆ ತೆಲುಗಿನ ಬಿಗ್ ಹಿಟ್ ಚಿತ್ರ ಪ್ರಭಾಸ್ ಅಭಿನಯದ "ಸಾಹೋ" ಬಿಡುಗಡೆ ತಲೆನೋವಾಗಿ ಪರಿಣಮಿಸಿದೆ.

ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ರವಿಚಂದ್ರನ್, ದರ್ಶನ್, ನಿಖಿಲ್ ಕುಮಾರಸ್ವಾಮಿ ಸೇರಿ ದೊಡ್ಡ ತಾರಾ ಬಳಗವೇ ಇದ್ದು  ನಾಲ್ಕನೇ ವಾರದಲ್ಲಿ ಉತ್ತಮವಾಗಿ ಪ್ರದರ್ಶನ ಕಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹಾಗಿದ್ದೂ "ಸಾಹೋ" ಬಿಡುಗಡೆಗಾಗಿ ಕನ್ನಡ ಚಿತ್ರದ ಪ್ರದರ್ಶನದ ಸಂಖೆಯನ್ನು ತಗ್ಗಿಸಿಸ್ರುವುದು ಸ್ಯಾಂಡಲ್ ವುಡ್ ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಚಿತ್ರ ನಿರ್ಮಾಪಕರು ಚಿತ್ರಮಂದಿರ ಮಾಲೀಕರನ್ನು ವಿನಂತಿಸಿದ ಬಳಿಕವೂ ಸಹ ಈ ನಿರ್ಧಾರಕ್ಕೆ ಬಂದಿರುವುದು ನಿರ್ಮಾಪಕರಲ್ಲಿಬೇಸರ ಮೂಡಿಸಿದೆ.

 ಪ್ರಭಾಸ್-ನಟಿಸಿದ ಚಿತ್ರವನ್ನು ಮುಂಚೂಣಿಗೆ ತಂದು ಹಿಟ್ ಚಿತ್ರ ಎಂದು ಘೋಷಿಸುವುದರೊಡನೆ ಮಲ್ಟಿಪ್ಲೆಕ್ಸ್‌ಗಳು ಕುರುಕ್ಷೇತ್ರದ ಪ್ರದರ್ಶನಗಳ ಸಂಖ್ಯೆಯನ್ನು ಹೆಚ್ಚಳ ಮಾಡಲು ಮುಂದಾಗಿವೆ.  ಆದರೆ ಇದಾಗಲೇ ಗಣೇಶನ ಹಬ್ಬ ಹಾಗೂ ವಾರಾಂತ್ಯಗಳು ಕಳೆದಿರುವ ಕಾರಣ ಚಿತ್ರತಂಡ ಈ ತೀರ್ಮಾನವನ್ನು ಹಗುರಾಗಿ ಪರಿಗಣಿಸಲು ತಯಾರಿಲ್ಲ. ಇದು ಕನ್ನಡ ಚಿತ್ರರಂಗದ ಕೆಟ್ಟ ಹಣೆಬರಹ ಎಂದು ಚಿತ್ರ ವಿತರಕ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ. "ಪರಭಾಷೆಯ ದೊಡ್ಡ ನಟರ ಚಿತ್ರ ಬಿಡುಗಡೆಯಾದಾಗ  ತಮ್ಮ ಚಲನಚಿತ್ರವನ್ನು ಚಿತ್ರಮಂದಿರಗಳಿಗೆ ತರಲು ಹೆಣಗಾಡಿದ ರಾಜ್ಯದ ನಿರ್ಮಾಪಕರ ಸಮಸ್ಯೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ"  ಅವರು ಹೇಳಿದ್ದಾರೆ.

"ಈ ಪರಿಸ್ಥಿತಿಯನ್ನು ಬದಲಿಸಲು ಒಂದು ಮಾರ್ಗವಿದೆ. ಅದಕ್ಕಾಗಿ ನಮಗೆ ರಾಜ್ಯ ಸರ್ಕಾರದ ಹಸ್ತಕ್ಷೇಪ ಮತ್ತು ಟಿಕೆಟ್ ದರಗಳ ಮಿತಿಯ ಕುರಿತ ನಿಯಮಾವಳಿ ಜಾರಿಯಾಗಬೇಕು" ಕರ್ನಾಟಕದಲ್ಲಿ ಬಿಡುಗಡೆಯಾಗುವ ಇತರ ಭಾಷೆಗಳಲ್ಲಿ ಚಲನಚಿತ್ರಗಳ ಟಿಕೆಟ್‌ಗಳ ಬೆಲೆ ಕನ್ನಡ ಚಿತ್ರಗಳಿಗಿಂತ ಹೆಚ್ಚಿದೆ.ಹಾಗಾಗಿ ಪ್ರದರ್ಶನಕಾರರು ಅದರತ್ತ ಆಕರ್ಷಿತರಾಗಿ ಹೆಚ್ಚು ಹೆಚ್ಚು ಸಂಖ್ಯೆಯ ಪರದೆಗಳಲ್ಲಿ ಅದನ್ನು ಬಿಡುಗಡೆಗೊಳಿಸುತ್ತಾರೆ. ಕಳೆದ ವಾರ "ಸಾಹೋ" ಬಂದಿದೆ. ಮುಂದೆ "ಸೈರಾ ನರಸಿಂಹ ರೆಡ್ಡಿ" ಬರಲಿದೆ.ಪರಭಾಷಾ ಚಿತ್ರ ಬೆಂಗಳೂರಿನಲ್ಲಿ ದಿನಪೂರ್ತಿ ಪ್ರದರ್ಶನ ಕಂಡಾಗ ಕನ್ನಡ ಚಿತ್ರವೊಂದರ ಟಿಕೆಟ್ ಗಿಂತ ಹೆಚ್ಚು ಬೆಲೆ ನಿಗದಿಪಡಿಸಲಾಗುತ್ತಿದ್ದು ಇದರಿಂದ  ಪ್ರದರ್ಶಕರಿಗೆ ಕನ್ನಡ ಚಿತ್ರಕ್ಕಿಂತ ಮೂರು ಪಟ್ಟು ಲಾಭವನ್ನು ಗಳಿಸಲು ಅನುವಾಗಲಿದೆ. ಇದನ್ನು ನಿಗ್ರಹಿಸುವ ಏಕೈಕ ಮಾರ್ಗವೆಂದರೆ ಟಿಕೆಟ್ ದರಕ್ಕೆ ನಿಯಂತ್ರಣ ಹೇರುವುದು" ವೆಂಕಟೇಶ್ ವಿವರಿಸುತ್ತಾರೆ.

ಟಿಕೆಟ್ ದರ ನಿಯಂತ್ರಣ ಸಂಬಂಧ ಈ ಹಿಂದೆ ಸಹ ಸರ್ಕಾರದೊಡನೆ ಚರ್ಚಿಸಿದ್ದೇವೆ. "ನಾವು ಕಳೆದ ವರ್ಷ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದೆವು. ಏಕರೂಪದ ದರವನ್ನು ತರಲು ಅವರನ್ನು ವಿನಂತಿಸಿದ್ದೇವೆ. ಹಾಗೆಯೇ ಬೇರೆ ರಾಜ್ಯಗಳಲ್ಲಿ ಜಾರಿಯಲ್ಲಿರುವ ನಿಯಮದಂತೆಯೇ ನಾವೂ ಬದಲಾಯಿಸಿಕೊಳ್ಳಬೇಕಿದೆ ಎಂದು ನಾವು ಅವರಿಗೆ ಒತ್ತಿ ಹೇಳಿದ್ದೇವೆ.  ಆದರೆ ಸರ್ಕಾರ ಇದುವರೆಗೆ ಯಾವ ಕ್ರಮ ತೆಗೆದುಕೊಂಡಿಲ್ಲ. " ಅವರು ಹೇಳಿದ್ದಾರೆ. "ಕನ್ನಡ ಚಲನಚಿತ್ರೋದ್ಯಮವು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳದ ಹೊರತು ಇಂತಹಾ ತೊಂದರೆಗಳು ಎದುರಾಗುತ್ತಲೇ ಇರುತ್ತದೆ.ಸರ್ಕಾರ ನೀಡಿದ ಸಬ್ಸಿಡಿಯ ಹೊರತಾಗಿಯೂ, ಮತ್ತು ಕನ್ನಡ ಚಿತ್ರೋದ್ಯಮ  ಯಾವುದೇ ಉಪಕ್ರಮವನ್ನು ತೆಗೆದುಕೊಂಡರೂ, ಇತರ ಭಾಷೆಗಳಿಂದ ಬರುವ ಚಲನಚಿತ್ರಗಳು ಉತ್ತಮ ಕನ್ನಡ ಚಿತ್ರದ ಅಂತಿಮ ಫಲಿತಾಂಶದ ಮೇಲೆ ಪರಿಣಾಮವನ್ನುಂಟುಮಾಡುತ್ತದೆ"

ಆಗಸ್ಟ್ 9 ರಂದು ಬಿಡುಗಡೆಯಾದ ಮೊದಲ ವಾರದಲ್ಲಿ ಕುರುಕ್ಷೇತ್ರಕ್ಕೆ 14-15 ಪ್ರದರ್ಶನಗಳನ್ನು ನೀಡಿದ್ದ ಓರಿಯನ್ ಮಾಲ್ ಆಗಸ್ಟ್ 30 ರಂದು "ಸಾಹೋ" ಗೆ ಪ್ರಥಮ ದಿನವೇ 30 ಪ್ರದರ್ಶನಕ್ಕೆ ಅವಕಾಶ ನೀಡಿದೆ.ಇನ್ನು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಉಲ್ಲೇಖಿಸಿ ಹೇಳುವುದಾದರೆ ಊರ್ವಶಿ ಚಿತ್ರಮಂದಿರದಲ್ಲಿ ದಿನಪೂರ್ತಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. "ಇಂತಹಾ ಚಿತ್ರಮಂದಿರಗಳು ಭಾಷೆಯ ಹೊರತಾಗಿ  ಪ್ರತಿ ವಾರ ದೊಡ್ಡ ಚಿತ್ರವೊಂದರ ಬಿಡುಗಡೆಯಾಗುತ್ತಿದ್ದಂತೆ ಅದುವರೆಗಿನ ಚಿತ್ರವನ್ನು ಯಾವುದೇ ಪೂರ್ವ ಮಾಹಿತಿಯಿಲ್ಲದೆ ತೆಗೆದು ಹಾಕಿ ಹೊಸ ಚಿತ್ರ ಪ್ರದರ್ಶನ ಮಾಡುತ್ತಾರೆ. ಇದರಿಂದ ಅವರು ಕನಿಷ್ಠ 15 ಲಕ್ಷ ರೂ. ಗಳಿಸಿಕೊಳ್ಳುವರು. ಹಾಗಾಗಿ ಅವರು ಚಿತ್ರವೊಂದು ಉತ್ತಮ ಪ್ರದರ್ಶನ ಕಾಣುತ್ತಿದೆಯೆ ಇಲ್ಲವೆ ಎಂಬುದನ್ನು ಗಮನಿಸುವುದಿಲ್ಲ" ನಿರ್ಮಾಪಕರು ಹೇಳಿದ್ದಾರೆ. 

ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುವುದನ್ನು ವೀಕ್ಷಕರು ಏಕಕಾಲದಲ್ಲಿ ನೋಡುವ ವಿಶ್ವದ ಏಕೈಕ ನಗರ ಬೆಂಗಳೂರು ಎಂದು ಹೇಳಿರುವ ವೆಂಕಟೇಶ್ ಇಲ್ಲಿ ಉತ್ತಮ ಓಪನಿಂಗ್ ಪಡೆಯುವುದು ಖಚಿತವಾಗಿರುವ ಕಾರಣ ಎಲ್ಲರೂ ಇಲ್ಲಿ ಪ್ರದರ್ಶನಕ್ಖಾಗಿ ಎದುರು ನೋಡುತ್ತಾರೆ.  "ಆದರೆ ನೀವು ಪ್ರಾದೇಶಿಕ ಭಾಷೆಯ ಚಲನಚಿತ್ರಗಳ ಬೆಳವಣಿಗೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಆದಾಯಕ್ಕಾಗಿ ಮಾತ್ರ ಚಿತ್ರಮಂದಿರಗಳನ್ನು ನಡೆಸಿದರೆ  ನಿರ್ಮಾಪಕರು ಮತ್ತು ವಿತರಕರಿಗೆ ಹಿನ್ನಡೆಯಾಗುತ್ತದೆ. " ಅವರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com