ಎಚ್ಚರಿಕೆ,ಬೆದರಿಕೆಗಳಿಂದ ಏನೂ ಆಗುವುದಿಲ್ಲ,ಮಾನವೀಯತೆಯಲ್ಲಿ ಸಾಗುತ್ತೇನೆ- ಕಿಚ್ಚ ಸುದೀಪ್ 

ಕಿಚ್ಚ ಸುದೀಪ್ ಕೂಡಾ ಸುಧೀರ್ಘವಾದ ಪತ್ರವೊಂದನ್ನೆ ಬರೆದಿದ್ದಾರೆ. ಇಲ್ಲಿ ಸತ್ಯವೇ ಅಂತಿಮ. ಎಚ್ಚರಿಕೆ , ಬೆದರಿಕೆಗಳಿಂದ ಏನೂ ಆಗುವುದಿಲ್ಲ. ಯಾರೂ ಸಣ್ಣವರಾಗುವುದಿಲ್ಲ, ನಾನು ಮಾನವತೆಯ ದಾರಿಯಲ್ಲಿ ಸಾಗುತ್ತೇನೆ ಎಂದು ಹೇಳಿದ್ದಾರೆ. 

Published: 17th September 2019 05:07 PM  |   Last Updated: 17th September 2019 05:13 PM   |  A+A-


SudeepDharshan

ಸುದೀಪ್, ದರ್ಶನ್

Posted By : Nagaraja AB
Source : Online Desk

ಬೆಂಗಳೂರು: ಇತ್ತೀಚಿಗೆ ಬಿಡುಗಡೆಯಾದ ಪೈಲ್ವಾನ್ ಚಿತ್ರ ಪೈರಸಿಗೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಹಾಗೂ ಡಿಬಾಸ್ ಅಭಿಮಾನಿಗಳ ನಡುವೆ ವಾದ, ವಿವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ತಾರಕಕ್ಕೇರಿದೆ. 

ಡಿಬಾಸ್ ಅಭಿಮಾನಿಗಳಿಂದ ಪೈಲ್ವಾನ್ ಚಿತ್ರ ಪೈರಸಿಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂಬುದು ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. 

ಈ ಮಧ್ಯೆ ದರ್ಶನ್ ಕೂಡಾ ಟ್ವೀಟ್ ಮಾಡಿದ್ದು, ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು ಪ್ರಚೋದಿಸಲು ಬರದಿರಿ ಎಂಬ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಕೂಡಾ ಸುಧೀರ್ಘವಾದ ಪತ್ರವೊಂದನ್ನೆ ಬರೆದಿದ್ದಾರೆ. ಇಲ್ಲಿ ಸತ್ಯವೇ ಅಂತಿಮ. ಎಚ್ಚರಿಕೆ , ಬೆದರಿಕೆಗಳಿಂದ ಏನೂ ಆಗುವುದಿಲ್ಲ. ಯಾರೂ ಸಣ್ಣವರಾಗುವುದಿಲ್ಲ, ನಾನು ಮಾನವತೆಯ ದಾರಿಯಲ್ಲಿ ಸಾಗುತ್ತೇನೆ ಎಂದು ಹೇಳಿದ್ದಾರೆ. 

ಪೈಲ್ವಾನ್ ಪೈರಸಿಗೆ ಸಂಬಂಧಿಸಿದಂತೆ ಯಾವ ನಟನ ಹೆಸರನ್ನೂ ಪ್ರಸ್ತಾಪಿಸಿಲ್ಲ, ನಿನ್ನೆ ನಮ್ಮ ನಿರ್ಮಾಪಕರು ಇದಕ್ಕೆ ಡಿಬಾಸ್ ಅಭಿಮಾನಿಗಳು ಕಾರಣರಲ್ಲ ಅಂತ ಹೇಳಿದ್ದಾರೆ. ಹಾಗಂತ ಪೈರಸಿ ಆಗಿಲ್ಲ ಅಂತಾ ಅರ್ಥವಲ್ಲ, ತುಂಬಾ ದೊಡ್ಡಮಟ್ಟದ ಪೈರಸಿಯಾಗಿದೆ. ಇದರಾಚೆಗೂ ಪೈಲ್ವಾನ್ ಸಿನಿಮಾಗೆ ಅಭಿಮಾನಿಗಳು, ಇಂಡಸ್ಟ್ರೀಯವರು ತೋರಿದ ಪ್ರೋತ್ಸಾಹವನ್ನು ಮರೆಯಲಾಗದು ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಸುದೀಪ್ ಬರೆದಿರುವ ಸುಧೀರ್ಘವಾದ ಪತ್ರ ಇಲ್ಲಿದೆ ಓದಿ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp