ಹಾಲಿವುಡ್ ಗೆ ಹಾರಲಿರೋ ಇಂದ್ರಜಿತ್ ಲಂಕೇಶ್, ಆಸ್ಕರ್ ನಾಮನಿರ್ದೇಶಿತ ನಟಿಯ ಚಿತ್ರಕ್ಕೆ ಆಕ್ಷನ್ ಕಟ್!

ಖ್ಯಾತ ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಹೊಸ ಚಿತ್ರ ಘೋಷಣೆಯಾಗಿದೆ ಹಾಗೆಂದ ಮಾತ್ರಕ್ಕೆ ಅದು ಸ್ಯಾಂಡಲ್ ವುಡ್ ಅಥವಾ ಬಾಲಿವುಡ್ ಚಿತ್ರ ಎಂದುಕೊಳ್ಳಬೇಡಿ ಈ ಬಾರಿ ಅವರು ನಿರ್ದೇಶಿಸಲು ಹೊರಟಿರುವುದು ಹಾಲಿವುಡ್ ಚಿತ್ರವನ್ನು.
ಇಂದ್ರಜಿತ್ ಲಂಕೇಶ್
ಇಂದ್ರಜಿತ್ ಲಂಕೇಶ್

ಖ್ಯಾತ ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಹೊಸ ಚಿತ್ರ ಘೋಷಣೆಯಾಗಿದೆ ಹಾಗೆಂದ ಮಾತ್ರಕ್ಕೆ ಅದು ಸ್ಯಾಂಡಲ್ ವುಡ್ ಅಥವಾ ಬಾಲಿವುಡ್ ಚಿತ್ರ ಎಂದುಕೊಳ್ಳಬೇಡಿ ಈ ಬಾರಿ ಅವರು ನಿರ್ದೇಶಿಸಲು ಹೊರಟಿರುವುದು ಹಾಲಿವುಡ್ ಚಿತ್ರವನ್ನು.

ಹೌದು, ಆಸ್ಕರ್ ನಾಮನಿರ್ದೇಶಿತ ಖ್ಯಾತ ಹಾಲಿವುಡ್ ನಟಿಯ ಮಹಿಳಾ ಪ್ರಧಾನ ಚಿತ್ರಕ್ಕೆ ಇಂದ್ರಜಿತ್ ನಿರ್ದೇಶನ ಮಾಡಲಿದ್ದು, ಹಾಲಿವುಡ್ ಚಿತ್ರ ನಿರ್ದೇಶಿಸಿದ ಮೊಟ್ಟ ಮೊದಲ ಕನ್ನಡಿಗ ಎಂಬ ಹೆಮ್ಮೆಗೆ ಪಾತ್ರರಾಗಲಿದ್ದಾರೆ. ಈಗಾಗಲೇ ನಟ, ನಟಿಯರ ಆಯ್ಕೆಯಾಗಿದ್ದು, ಮೊರಾಕ್ಕೋದಲ್ಲಿ ಚಿತ್ರೀಕರಣ ನಡೆಸಲು ಪ್ಲಾನ್ ಮಾಡಿದ್ದಾರಂತೆ ಶುಕ್ರವಾರದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, “ಎಲ್ಲ ಕಲಾವಿದರು, ತಂತ್ರಜ್ಞರು ಹಾಲಿವುಡ್ ನವರೇ ಆಗಿರಲಿದ್ದಾರೆ ಮುಸ್ಲಿಂ ಸಮುದಾಯದ ಸಂಪ್ರದಾಯವೊಂದು ಮಹಿಳೆಯರನ್ನು ನಲುಗಿಸುತ್ತಿದೆ ಶಕೀಲಾ ಚಿತ್ರವನ್ನು ನೋಡಿದ ತಂತ್ರಜ್ಞರೊಬ್ಬರು ಮುಸ್ಲಿಂ ಮಹಿಳೆಯರು ಅನುಭವಿಸುವ ನೋವಿನ ಕಥೆಯ ಎಳೆಯನ್ನು ತಿಳಿಸಿದ್ದು, ಅದನ್ನು ಚಿತ್ರಕ್ಕೆ ತಕ್ಕಹಾಗೆ ಹೆಣೆಯಲಾಗಿದೆ. ಕಥೆಯನ್ನು ಮಹಿಳೆಯೊಬ್ಬರು ಬರೆದಿದ್ದಾರೆ ಇದು ಯೂನಿವರ್ಸಲ್ ಕಥಾವಸ್ತು ಹೊಂದಿದ್ದು, ವಿಶ್ವಾದ್ಯಂತ ಬಿಡುಗಡೆಯಾಗಲಿದೆ” ಎಂದರು.

ಹಾಲಿವುಡ್ ಚಿತ್ರದ ಹೆಸರು, ನಟ, ನಟಿಯರು, ತಂತ್ರಜ್ಞರ ಕುರಿತು ಲಾಸ್ ಏಂಜಲೀಸ್ ಗೆ ಹೋದ ಬಳಿಕ ಪ್ರಕಟಿಸುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.

ಇನ್ನೊಂದು ತಿಂಗಳಲ್ಲಿ ಶಕೀಲಾ ರಿಲೀಸ್

ಶಕೀಲಾ ಚಿತ್ರ ಸಿದ್ಧವಾಗಿದ್ದು, ಸೆನ್ಸಾರ್ ಆದನಂತರ ಪ್ರಚಾರ ಕಾರ್ಯ ಶುರುವಾಗಲಿದೆ ಒಂದು ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು.

ಕನ್ನಡದಲ್ಲಿ ಈ ವರೆಗೂ 9 ಚಿತ್ರಗಳನ್ನು ನಿರ್ದೇಶಿಸಿದ್ದು, 10ನೆಯದು ಹಿಂದಿ ಭಾಷೆಯ ಸಿನಿಮಾವಾದರೆ, ನಲ್ಲಿ 11 ನೆಯದಾಗಿ ಹಾಲಿವುಡ್ ಚಿತ್ರ ನಿರ್ದೇಶಿಸುತ್ತಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.

ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವಾಸೆ

ಭಾನುವಾರ ಇಂದ್ರಜಿತ್ ಲಂಕೇಶ್ ಜನ್ಮದಿನವಾಗಿದ್ದು, ಈ ಬಾರಿ ವಿಭಿನ್ನವಾಗಿ ಜನ್ಮದಿನ ಆಚರಿಸಿಕೊಳ್ಳಲು ಬಯಸಿದ್ದಾರಂತೆ. “ಪ್ರವಾಹದ ಸಂದರ್ಭದಲ್ಲಿ ದಿವಂಗತ ಯೋಧರೊಬ್ಬರ ಪುತ್ರ ರೈಲ್ವೆ ನಿಲ್ದಾಣದಲ್ಲಿ ಜ್ವರದಿಂದ ಬಳಲುತ್ತಿರುವ ಸುದ್ದಿ ಕೇಳಿದೆ. ಹುಟ್ಟುಹಬ್ಬದ ದಿನ ಆ 14 ವರ್ಷ ವಯಸ್ಸಿನ ಬಾಲಕನಿಗೆ ಸಹಾಯ ಮಾಡುವ ಆಸೆಯಿದೆ ಆದರೆ ವಿಳಾಸ ಗೊತ್ತಾಗಬೇಕಿದೆ” ಎಂದು ಹೇಳಿದರು.

‘ಮಜಾ ಟಾಕೀಸ್’ ಇಜಿಲಾ ಪಾತ್ರ ತೃಪ್ತಿ ತಂದಿದೆ

ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ಇಂದ್ರಜಿತ್ ಲಂಕೇಶ್ ‘ಇಜಿಲಾ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, “ಎಲ್ಲರನ್ನೂ ನಗಿಸುವ ಕಾರಣ ತೃಪ್ತಿ ತಂದಿದೆ ಆರೋಗ್ಯವೂ ಸುಧಾರಿಸಿದೆ” ಎಂದಿದ್ದಾರೆ.

ಮಜಾ ಟಾಕೀಸ್’ ಕಾರ್ಯಕ್ರಮಕ್ಕೆ ಸದ್ಯ 3 ತಿಂಗಳು ಬ್ರೇಕ್ ಸಿಕ್ಕಿದ್ದು, ಇದೇ ಗ್ಯಾಪ್ ನಲ್ಲಿ ಹಾಲಿವುಡ್ ಚಿತ್ರಕ್ಕೆ ಬೇಕಾದ ಹಲವು ತಯಾರಿಗಳನ್ನು ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ,.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com