
ಬೆಂಗಳೂರು: ಮಾರಕ ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡುತ್ತಿರುವವರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಮೈಸೂರಿನ ನಿವಾಸಿ ಸುತಾನ್ ದಿಲೀಪ್ ಕೊರೋನಾ ವಾರಿಯರ್ ಶೀರ್ಷಿಕೆಯಲ್ಲಿ ಚಿತ್ರವೊಂದನ್ನು ನಿರ್ಮಿಸಿದ್ದು, ಯು ಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.
ದಿಲೀಪ್ ಈ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದಾರೆ.ಚಿತ್ರದಲ್ಲಿ ನಾಲ್ಕು ನಿಮಿಷ ಲಾಕ್ ಡೌನ್ ಸಂದರ್ಭದಲ್ಲಿ ಕರ್ತವ್ಯದಲ್ಲಿ ತೊಡಗಿಸಿಕೊಂಡವರ ಹೋರಾಟ, ತ್ಯಾಗವನ್ನು ತೋರಿಸಲಾಗಿದೆ.
ಮೈಸೂರು ಜಿಲ್ಲಾ ಆಡಳಿತದ ಕೋವಿಡ್-19 ಡಿಜಿಟಲ್ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿರುವ ದಿಲೀಪ್, ಲಾಕ್ ಡೌನ್ ನಿಯಮಗಳ ಮಹತ್ವ ಕುರಿತಂತೆ ಜನರಿಗೆ ಸಂದೇಶ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ನಾವು ಕುಟುಂಬದೊಂದಿಗೆ ಮನೆಯಲ್ಲಿ ಇದ್ದೇವೆ. ಆದರೆ, ಡಾಕ್ಟರ್, ಪೊಲೀಸ್ ಸಿಬ್ಬಂದಿ ತಮ್ಮನ್ನು ಹಾಗೂ ಅವರ ಕುಟುಂಬದ ಪ್ರಾಣವನ್ನು ಲೆಕ್ಕಿಸದೆ ನಮನೆಲ್ಲಾ ರಕ್ಷಿಸುತ್ತಿದ್ದಾರೆ.ಲಾಕ್ ಡೌನ್ ಗೆ ಗೌರವ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುವುದಾಗಿ ದಿಲೀಪ್ ಹೇಳಿದ್ದಾರೆ. ಸೀಮಿತ ಪ್ರಮಾಣದ ಸಂಪನ್ಮೂಲಗಳಲ್ಲಿ ಮೂರು ಗಂಟೆಗಳ ಕಾಲ ಚಿತ್ರವನ್ನು ಚಿತ್ರೀಕರಿಸಲಾಗಿದೆ.
ದಿಲೀಪ್ ಅಲ್ಲದೇ ಬೆಂಗಳೂರಿನ ಇತರ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೋವಿಡ್-19 ಜೀವನವನ್ನು ಏರುಪೇರು ಮಾಡಿದೆ. ಆದರೆ, ಇದೇ ಹಾದಿಯಲ್ಲಿ ನಾವೆಲ್ಲರೂ ಕೋವಿಡ್ -19 ವಾರಿಯರ್ ಪಾತ್ರ ಮಾಡಿರುವುದಾಗಿ ಮೀನಾ ಶಾಂತಲಾ ಹೇಳಿದ್ದಾರೆ.
Advertisement