ದೀರ್ಘ ಕಾಲದ ಗೆಳತಿ ವರ್ಷಾ ಬೆಳವಾಡಿಯೊಂದಿಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನಟ ವಿನಾಯಕ್ ಜೋಶಿ

ಸ್ಯಾಂಡಲ್ ವುಡ್ ನಟ, ಆರ್ಜೆ ವಿನಾಯಕ್ ಜೋಶಿ ತಮ್ಮ ಗೆಳತಿ, ಬ್ಯಾಡ್ಮಿಂಟನ್ ತಾರೆ ವರ್ಷಾ ಬೆಳವಾಡಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ದೀರ್ಘ ಕಾಲದ ಗೆಳತಿ ವರ್ಷಾ ಬೆಳವಾಡಿಯೊಂದಿಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನಟ ವಿನಾಯಕ್ ಜೋಶಿ

ಸ್ಯಾಂಡಲ್ ವುಡ್ ನಟ, ಆರ್ಜೆ ವಿನಾಯಕ್ ಜೋಶಿ ತಮ್ಮ ಗೆಳತಿ, ಬ್ಯಾಡ್ಮಿಂಟನ್ ತಾರೆ ವರ್ಷಾ ಬೆಳವಾಡಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಇವರ ವಿವಾಹ ಕಾರ್ಯಕ್ರಮ ನೆರವೇರಿದ್ದು 15 ರಿಂದ 55 ವಯೋಮಾನದವರು ಮಾತ್ರ ವಿವಾಹದಲ್ಲಿ ಭಾಗವಹಿಸಿದ್ದರು. ಕೊರೋನಾ ಭೀತಿಯ ಹಿನ್ನೆಲೆ ಹೆಚ್ಚಿನ ಜನರು ಮದುವೆಯಲ್ಲಿ ಭಾಗವಹಿಸಿಲ್ಲ.

ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ವರ್ಷಾ ಬೆಳವಾಡಿ ಹಾಗೂ ವಿನಾಯಕ್ ಜೋಶಿ ಬಾಲ್ಯದಿಂದಲೇ ಪರಿಚಯಸ್ಥರಾಗಿದ್ದರು.  ಇತ್ತೀಚೆಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 120ನೇ ಸ್ಥಾನದಲ್ಲಿದ್ದ ವರ್ಷಾ ಬೆಳವಾಡಿ ಇದೀಗ ಒಂದು ಅಕಾಡಮಿಯಲ್ಲಿ ಕೋಚ್ (ತರಬೇತುದಾರ)ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

‘ನಮ್ಮೂರ ಮಂದಾರ ಹೂವೆ’, ‘ಅಮೃತ ವರ್ಷಿಣಿ’, ‘ಲಾಲಿ’, ‘ಅಪ್ಪು’ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ವಿನಾಯಕ್ ಜೋಶಿ ಟಿವಿ ಧಾರಾವಾಹಿಗಳು, ರಿಯಾಲಿಟಿ ಶೋಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com