ರಾಷ್ಟ್ರ ಪ್ರಶಸ್ತಿ ವಿಜೇತ 'ವೆಂಕಿ' ಅಜ್ಜ ನಿಧನ, ಡಾಲಿ ಧನಂಜಯ್ ಕಂಬನಿ

"ವೆಂಕಿ" ಅಜ್ಜ ಖ್ಯಾತಿಯ ನಟ, ರಂಗಕರ್ಮಿ ಸುಬ್ಬರಾವ್ ಇಂದು ನಿಧನರಾಗಿದ್ದಾರೆ. 
ರಾಷ್ಟ್ರ ಪ್ರಶಸ್ತಿ ವಿಜೇತ 'ವೆಂಕಿ' ಅಜ್ಜ ನಿಧನ, ಡಾಲಿ ಧನಂಜಯ್ ಕಂಬನಿ
Updated on: 

ಬೆಂಗಳೂರು: "ವೆಂಕಿ" ಅಜ್ಜ ಖ್ಯಾತಿಯ ನಟ, ರಂಗಕರ್ಮಿ ಸುಬ್ಬರಾವ್ ಇಂದು ನಿಧನರಾಗಿದ್ದಾರೆ. 

ಈ ಬಗ್ಗೆ ನಿರ್ದೇಶಕ ಸತ್ಯ ಟ್ವೀಟ್ ಮಾಡಿದ್ದು "ನನ್ನ ಕ್ರಿಯಾಶೀಲತೆಯ ಗುರು, ಅನೇಕ ಪೌರಾಣಿಕ ಪಾತ್ರಗಳನ್ನು ನನಗೆ ಪರಿಚಯಿಸಿದ ಮೇಷ್ಟರು, ನೀವೆಲ್ಲರೂ ಮೆಚ್ಚಿದ ನನ್ನ ಕಿರುಚಿತ್ರ 'ಜಯನಗರ 4th ಬ್ಲಾಕ್ ' ನ ನಿಷ್ಕಲ್ಮಶ ನಗುವಿನ 'ವೆಂಕಿ', ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀ. ಸುಬ್ಬರಾವ್.ಅವರಿತ್ತ ಸ್ಪೂರ್ತಿಗೆ ಕೊನೆಯೆಂಬುದಿಲ್ಲ. ಶುಭವಿದಾಯ." ಎಂದಿದ್ದಾರೆ.

ನಟ ಡಾಲಿ ಧನಂಜಯ್ ಸಹ ಸುಬ್ಬರಾವ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

"ಯನಗರ 4th ಬ್ಲಾಕ್ ನಲ್ಲಿ ಜೊತೆಯಾದ ಜೀವ, ಸ್ಫೂರ್ತಿಯಾದ ಜೀವ, ನನ್ನ ಪಾಲಿನ ವೆಂಕಿ, ಸುಬ್ಬರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ Rest in peace" ಎಂದು ಧನಂಜಯ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com