ಚಿತ್ರಮಂದಿರವೆಂಬ ದೇವಾಲಯ ಪ್ರವೇಶಿಸಿದರೆ ಸಿನಿಮಾಗೆ ಬೆಲೆ: ಕಿಚ್ಚ ಸುದೀಪ್
ಬೆಂಗಳೂರು: ಎಂಜಿಪಿ ಕ್ರಿಯೇಷನ್ಸ್ ಅರ್ಪಿಸುವ ನಿರಂತರ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾದ ಐರಾವನ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಹಾರೈಸಿದರು.
ಇದೇ ವೇಳೆ ಮಾತನಾಡಿದ ಸುದೀಪ್, ಸಿನಿಮಾ ಮೊದಲು ಚಿತ್ರಮಂದರಿಕ್ಕೆ ಬರಬೇಕು. ಎಲ್ಲೋ ಕಳೆದು ಹೋಗಬೇಡಿ. ಶ್ರಮಕ್ಕೆ ಬೆಲೆ ಸಿಗಬೇಕೆಂದರೆ, ಚಿತ್ರಮಂದಿರ ಅನ್ನೋ ದೇವಸ್ಥಾನ ಪ್ರವೇಶಿಸಲೇಬೇಕು. ಅದೇ ರೀತಿ ಇಷ್ಟು ದಿನ ಒಳ್ಳೇ ಚಿತ್ರಮಂದಿರ ಸಿಗಲಿ ಎಂದು ಕಾಯುತ್ತಿದ್ದೇವು. ಇದೀಗ ಚಿತ್ರಮಂದಿರ ಸಿಕ್ಕರೆ ಸಾಕಪ್ಪ ಎಂಬಂತಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ಚಿತ್ರದ ನಿರ್ಮಾಪಕರು ಮಾತನಾಡಿ, ಹುಚ್ಚ ಸಿನಿಮಾ ಸಮಯದಿಂದಲೂ ಸುದೀಪ್ ಅವರನ್ನು ನೋಡಿಕೊಂಡು ಬಂದಿದ್ದೇವೆ. ಜೆಕೆ ಅವರ ಮೂಲಕ ಅವರನ್ನು ಭೇಟಿ ಮಾಡಿಬಂದೆವು. ಈ ಕಾರ್ಯಕ್ರಮಕ್ಕೆ ಬಂದು ಟೀಸರ್ ಲಾಂಚ್ ಮಾಡಿದ್ದಕ್ಕೆ ಅವರಿಗೆ ಧನ್ಯವಾದ. ಇಡೀ ತಂಡದಲ್ಲಿ ಎಲ್ಲರೂ ಯುವಕರೇ. ಯುವಕರನ್ನು ಗುರುತಿಸಬೇಕೆಂಬ ಉದ್ದೇಶದಿಂದ ಸಿನಿಮಾರಂಗಕ್ಕೆ ಬಂದಿದ್ದೇನೆ ಎಂದರು.
‘ಡೆಡ್ಲಿ 2 ದಿಂದ ನನ್ನ ಸಿನಿ ಜರ್ನಿ ಆರಂಭವಾಗಿತ್ತು. ನನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಜಾಕ್ ಮಂಜು ಅವರು. ನಂತರ ಸ್ವಲ್ಪದಿನ ಚಿತ್ರರಂಗದಿಂದ ದೂರ ಉಳಿದೆ. ಕೆಂಪೇಗೌಡ–2 ಚಿತ್ರದ ಮೂಲಕ ಮತ್ತೆ ಸಿನಿಮಾ ಮಾಡಲು ಆರಂಭಿಸಿದೆ. ಟೀಮ್ ಇಂಡಿಯಾ ಕ್ರಿಕೆಟ್ ತಂಡದಲ್ಲಿ ಆಡಬೇಕು ಎಂಬ ಕನಸಿತ್ತು. ಆದರೆ ಸಿಸಿಎಲ್‌ನಲ್ಲಿ ಆಡುವ ಮೂಲಕ ಆ ಕನಸನ್ನು ನನಸು ಮಾಡಿದ್ದಾರೆ ಕಿಚ್ಚ ಸುದೀಪ್ ಅವರು. ನನ್ನ ಕಷ್ಟ, ಸುಖ ಎರಡರಲ್ಲೂ ಅವರು ಜೊತೆಯಾಗಿದ್ದಾರೆ ಎಂದರು ಜೆಕೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ