ರಾಬರ್ಟ್' ತಂಡದಿಂದ ಕ್ರಿಸ್ಮಸ್ ಗೆ ಮಾಸ್ಕ್, ಟೀ-ಶರ್ಟ್, ಕಾಫಿ ಮಗ್, ಕೀ-ಚೈನ್ ಗಳ ಬಿಡುಗಡೆ!
ಬೆಂಗಳೂರು: ಹಲವು ಕಾರಣಗಳಿಂದ ಕುತೂಹಲ ಕೆರಳಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರ ಬಿಡುಗಡೆಯ ದಿನಾಂಕ ಇನ್ನೂ ನಿಗದಿಯಾಗದಿದ್ದರೂ, ಟೀಸರ್, ಟ್ರೈಲರ್ ಮೂಲಕ ಈಗಾಗಲೇ ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ.
ಕ್ರಿಸ್ಮಸ್ ದಿನವಾದ ನಾಳೆ ರಾಬರ್ಟ್ ಚಿತ್ರ ತಂಡದಿಂದ ಮಾಸ್ಕ್, ಟೀ ಶರ್ಟ್, ಕಾಫಿ ಮಗ್, ಕೀ ಚೈನ್, ಫೋಸ್ಟರ್ ಮತ್ತಿತರ ವಿವಿಧ ರೀತಿಯ ವಸ್ತುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಈ ವಸ್ತುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ನಿರ್ದೇಶಕ ತರುಣ್ ಕಿಶೋರ್ ತಿಳಿಸಿದ್ದಾರೆ.
ಸಮಯದ ಅಗತ್ಯತೆಯಿಂದಾಗಿ ಮೊದಲಿಗೆ ಮಾಸ್ಕ್ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿತು. ಪ್ರೇಕ್ಷಕರ ಸುರಕ್ಷತೆಗೆ ಕಾಳಜಿ ವಹಿಸಲಾಗಿದೆ. ಸುರಕ್ಷತೆಯ ಪ್ರಾಮುಖ್ಯತೆಯನ್ನು ಮನಗೊಂಡು ಈ ಬಗ್ಗೆ ಸಾಮಾಜಿಕ ಅರಿವು ಮೂಡಿಸಲು ಪ್ರಯತ್ನಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಗರಿಷ್ಠ ಸುರಕ್ಷತೆಯ ನಿಟ್ಟಿನಲ್ಲಿ ಮಾಸ್ಕ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಇವುಗಳು ಆರು ಲೇಯರ್ ನಿಂದ ಕೂಡಿದ್ದು, ಡಿ ಮಾಸ್ಕ್ ಎಂಬ ಹೆಸರನ್ನಿಡಲಾಗಿದೆ. ಪ್ರತಿಯೊಂದು ಪ್ಯಾಕಿನಲ್ಲಿ ಮೂರು ಸೆಟ್ ಗಳು ಇರಲಿವೆ. ಸರ್ಕಾರದ ಮಾರ್ಗಸೂಚಿಯಂತೆ ಉಸಿರಾಟಕ್ಕೆ ತೊಂದರೆಯಾಗದಂತೆ ಇವುಗಳನ್ನು ತಯಾರಿಸಲಾಗಿದೆ. ಇವುಗಳು ಕಡಿಮೆ ದರದಲ್ಲಿ ಪ್ರೇಕ್ಷಕರ ಕೈ ಸೇರಲಿವೆ ಎಂದು ಟ್ಯಾಗ್ ಮೈ ಟಿ ಸಹ ಸಂಸ್ಥಾಪಕ ರಾಹುಹ್ ರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ