'ಬಿಗ್ ಬಾಸ್ ಸೀಸನ್ 7' ಮುಗಿಸಿ  'ಫ್ಯಾಂಟಮ್'ನತ್ತ ಹೊರಟ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಇದಾಗಲೇ ಶಿವ ಕಾರ್ತಿಕ್ ಅವರ ಕೋಟಿಗೊಬ್ಬ  3 ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ಕನ್ನಡದ ಪ್ರಸಿದ್ದ ರಿಯಾಲಿಟಿ ಶೋ  ಬಿಗ್ ಬಾಸ್ ಸೀಸನ್ 7 ನಿರೂಪಕನಾಗಿಯೂ ಸಹ ಯಶಸ್ವಿಯಾಗಿದ್ದಾರೆ. ಇದೀಗ ಬಿಗ್ ಬಾಸ್ ಕೂಡ ಮುಗಿದಿದೆ. ಆದರೆ ಕಿಚ್ಚ ಯಾವ ಕಾರಣಕ್ಕೂ ವಿರಾಮ ತೆಗೆದುಕೊಳ್ಳುವಂತಿಲ್ಲ. ಏಕೆಂದರೆ ಮುಂದಿನ ವಾರ ಫ್ಯಾಂಟಮ್ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸ
ಸುದೀಪ್
ಸುದೀಪ್
Updated on: 

ಕಿಚ್ಚ ಸುದೀಪ್ ಇದಾಗಲೇ ಶಿವ ಕಾರ್ತಿಕ್ ಅವರ ಕೋಟಿಗೊಬ್ಬ  3 ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ಕನ್ನಡದ ಪ್ರಸಿದ್ದ ರಿಯಾಲಿಟಿ ಶೋ  ಬಿಗ್ ಬಾಸ್ ಸೀಸನ್ 7 ನಿರೂಪಕನಾಗಿಯೂ ಸಹ ಯಶಸ್ವಿಯಾಗಿದ್ದಾರೆ. ಇದೀಗ ಬಿಗ್ ಬಾಸ್ ಕೂಡ ಮುಗಿದಿದೆ. ಆದರೆ ಕಿಚ್ಚ ಯಾವ ಕಾರಣಕ್ಕೂ ವಿರಾಮ ತೆಗೆದುಕೊಳ್ಳುವಂತಿಲ್ಲ. ಏಕೆಂದರೆ ಮುಂದಿನ ವಾರ ಫ್ಯಾಂಟಮ್ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲು ಅವರು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.

ಫ್ಯಾಂಟಮ್ ಚಿತ್ರದ ಘೋಷಣೆಯಾಗಿದ್ದಾಗಿನಿಂದಲೂ ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ.ನಿರ್ದೇಶಕ ಅನೂಪ್ ಭಂಡಾರಿ  ಜತೆ ಮೊದಲ ಬಾರಿಗೆ ಕಿಚ್ಚ್ ಸೇರಿಕೊಂಡಿದ್ದು ಇನ್ನೊಂದು ವಿಶೇಷ. ಮಂಜುನಾಥಗೌಡರ ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗುತ್ತಿದ್ದು, ರಂಗಿತರಂಗ ನಾಯಕ ನಿರೂಪ್ ಭಂಡಾರಿ ಕೂಡ ಈ ಚಿತ್ರದಲ್ಲಿದ್ದರೆ.

ಇನ್ನು ಮಹತ್ವದ ವಿಷಯವೆಂದರೆ ತೆಲುಗಿನ ಪ್ರಸಿದ್ದ ನಾಯಕಿ ನಟಿ ಸಮಂತಾ ಅಕ್ಕಿನೇನಿ ಕೂಡ ಈ ಚಿತ್ರದ ಭಾಗವಾಗಿದ್ದಾರೆ. ಎಂಬ ವರದಿಗಳಿದೆ. ಆದಾಗ್ಯೂಚಿತ್ರ ತಯಾರಕರು ಕಥೆಯ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದು ಕಿಚ್ಚನ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಸುದೀಪ್ ಫ್ಯಾಂಟಮ್‌ನಲ್ಲಿ ಯಾವ ಬಗೆಯ ಪಾತ್ರದಲ್ಲಿ ಯಾವ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕಾತುರತೆ ಪ್ರತಿಯೊಬ್ಬರಲ್ಲಿ ಮನೆಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com