ಆರ್ ಎಕ್ಸ್ ಸೂರಿ ಚಿತ್ರದ ನಾಯಕಿ ಆಕಾಂಕ್ಷಾ ಬರೆದಿರುವ ಕಥೆಗೆ ಕರ್ವ ಚಿತ್ರದ ನಿರ್ದೇಶಕ ನವನೀತ್ ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.
ಆಕಾಂಕ್ಷಾರ ಕಥೆಗೆ ಟೈಪ್ ರೈಟರ್ ಎಂದು ಶೀರ್ಷಿಕೆ ಇಡಲಾಗಿದ್ದು ಈ ಚಿತ್ರವನ್ನು ನವನೀತ್ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದರಿಂದ ತಾವೇ ಚಿತ್ರವನ್ನು ನಿರ್ಮಾಣ ಸಹ ಮಾಡುತ್ತಿದ್ದಾರೆ.
ಆಕಾಂಕ್ಷಾ ಅವರು ನನಗೆ ಒನ್ ಲೈನ್ ಸ್ಟೋರಿ ಹೇಳಿದಾಗ ನನಗೆ ಬಹಳ ಥ್ರಿಲ್ ಅನಿಸಿತ್ತು. ನಂತರ ನಾನು ಚಿತ್ರಕಥೆ ಬರೆದಿದ್ದು ಇದೀಗ ಸಿನಿಮಾಟೋಗ್ರಫರ್ ಮೋಹನ್ ಜೊತೆ ಸೇರಿ ನಿರ್ಮಾಣ ಮಾಡುತ್ತಿರುವುದಾಗಿ ನವನೀತ್ ಹೇಳಿದ್ದಾರೆ.
ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವಾಗಿರಲಿದೆ. ಚಿತ್ರದಲ್ಲಿ ಬಹುಭಾಷಾ ನಟಿ ಊವರ್ಶಿ, ರವಿಶಂಕರ್, ಶಂಕರ್ ಅಶ್ವತ್ಥ್ ನಟಿಸುತ್ತಿದ್ದಾರೆ.
Advertisement