'ವೈಯಕ್ತಿಕ ಸಿದ್ಧಾಂತದಿಂದ ಮನಸು ಒಡೆದ ಹಾಲಾಯಿತು, ನಾನು ಈಕೆಯನ್ನು ಬಹಳ ಇಷ್ಟಪಡುವೆ'

ನೀರ್ ದೋಸೆ ಸಿನಿಮಾ ವಿವಾದದ ನಂತರ ಹಿರಿಯ ನಟ ಜಗ್ಗೇಶ್  ಟ್ವಿಟ್ಟರ್ ನಲ್ಲಿ ಆಗಾಗ್ಗೆ ನಟಿ ರಮ್ಯಾ ಅವರ ಕಾಲೆಳೆಯುತ್ತಿದ್ದರು, ಆದರೆ ನಿನ್ನೆ ಜಗ್ಗೇಶ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ರಮ್ಯಾ ಅವರ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. 
ರಮ್ಯಾ
ರಮ್ಯಾ
Updated on: 

ಬೆಂಗಳೂರು: ನೀರ್ ದೋಸೆ ಸಿನಿಮಾ ವಿವಾದದ ನಂತರ ಹಿರಿಯ ನಟ ಜಗ್ಗೇಶ್  ಟ್ವಿಟ್ಟರ್ ನಲ್ಲಿ ಆಗಾಗ್ಗೆ ನಟಿ ರಮ್ಯಾ ಅವರ ಕಾಲೆಳೆಯುತ್ತಿದ್ದರು, ಆದರೆ ನಿನ್ನೆ ಜಗ್ಗೇಶ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ರಮ್ಯಾ ಅವರ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. 

ಪುನೀತ್ ರಾಜಕುಮಾರ್​ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ತುಂಬ ಹಿಂದೆ ನಟಿ ರಮ್ಯಾ ಪಾಲ್ಗೊಂಡಿದ್ದರು. ಅದರಲ್ಲಿ ರಮ್ಯಾ ಅವರು ಪುನೀತ್​ ರಾಜ್​ಕುಮಾರ್​ ಅವರ ಬಳಿ ಜಗ್ಗೇಶ್​ ಅವರ ಮಿಮಿಕ್ರಿ ಮಾಡಲು ಕೇಳಿದ್ದರು. ಆಗ ಪುನೀತ್​ ಕೂಡ ಜಗ್ಗೇಶ್​ ಅವರ ಎರಡು ಡೈಲಾಗ್​ಗಳನ್ನು ಮಿಮಿಕ್ರಿ ಮಾಡಿದ್ದರು. 

ಈಗ ಅದೇ ಫನ್ನಿ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡ ನಟ ಜಗ್ಗೇಶ್​ ಅವರು ರಮ್ಯಾರನ್ನು ಹೊಗಳಿದ್ದಾರೆ. ನಾನು ರಮ್ಯಾ ಅವರನ್ನು ವೈಯಕ್ತಿಕವಾಗಿ ತುಂಬ ಇಷ್ಟಪಡುತ್ತೇನೆ.ಆದರೆ ಕೆಲ ಸಿದ್ಧಾಂತಗಳಿಂದಾಗಿ ಮನಸು ಒಡೆದ ಹಾಲಾಯಿತು. ಈಕೆ ಒಳ್ಳೆಯ ನಟಿ. ಮತ್ತೆ ನಟಿಸಲಿ ಎಂದು ಹಾರೈಸುವೆ. ರಮ್ಯಾ ಅವರು ವಾಪಸ್​ ಬರಲಿ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com