ಬೆಂಗಳೂರು ಸಿನೆಮೋತ್ಸವ: ಆ್ಯನಿಮೇಶನ್ ಸಿನೆಮಾ ಜನಪ್ರಿಯತೆ ದುಡಿಸಿಕೊಳ್ಳುವುದು ಅಗತ್ಯ!

ಆ್ಯನಿಮೇಶನ್ ಸಿನೆಮಾಗಳು ಜಗತ್ತಿನಾದ್ಯಂತ ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆಯುತ್ತಿದೆ. ಇಂಥ ತಂತ್ರಜ್ಞಾನವನ್ನು ಸ್ಥಳೀಯವಾಗಿಯೂ ದುಡಿಸಿಕೊಳ್ಳುವ ಅಗತ್ಯವಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಆ್ಯನಿಮೇಶನ್ ಸಿನೆಮಾಗಳು ಜಗತ್ತಿನಾದ್ಯಂತ ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆಯುತ್ತಿದೆ. ಇಂಥ ತಂತ್ರಜ್ಞಾನವನ್ನು ಸ್ಥಳೀಯವಾಗಿಯೂ ದುಡಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಸಂವಾದ ಆಯೋಜಿಸಲಾಗಿದೆ.

ಲಯನ್ ಕಿಂಗ್ ಬಹಳ ಪ್ರಸಿದ್ಧವಾದ ಅ್ಯನಿಮೇಶನ್ ಸಿನೆಮಾ. ಇದಕ್ಕೆ ಸಂಬಂಧದಿಂದ ಕೆಲಸಗಳು ಬೆಂಗಳೂರಿನಲ್ಲಿ ಆಗಿದೆ ಎಂದು ಕೇಳಿದ್ದೀನಿ. ಇಂಥ ಸಿನೆಮಾಗಳು ಸ್ಥಳೀಯವಾಗಿಯೂ ಬರಬೇಕಾದ ಅಗತ್ಯವಿದೆ. ಆದ್ದರಿಂದ ಈ ಸಿನೆಮಾ ನಿರ್ಮಾಣ – ಬಳಸಿಕೊಂಡಿರುವ ತಂತ್ರಜ್ಞಾನದ ಬಗ್ಗೆ ತಜ್ಜರು ಉಪನ್ಯಾಸ ನೀಡುತ್ತಾರೆ ಎಂದು ಸಿನೆಮೋತ್ಸವ ಕಲಾ ನಿರ್ದೇಶಕ ವಿದ್ಯಾಶಂಕರ್ ಎನ್ ಜೋಯಿಸ್ ಹೇಳಿದರು.

ಭಾರತೀಯ ಚಿತ್ರರಂಗದಲ್ಲಿಯೂ ಆ್ಯನಿಮೇಶನ್ ಸಿನೆಮಾಗಳು ಬಂದಿವೆಯಾದರೂ ವಿರಳ. 2019ರಲ್ಲಿ ತೆರೆಕಂಡ ಸಂಗೀತಮಯ ಆ್ಯನಿಮೇಶನ್ ಹಾಲಿವುಡ್ ಸಿನೆಮಾ ಲಯನ್ ಕಿಂಗ್ ನಿರ್ಮಾಣದ ತಂತ್ರಜ್ಞಾನ ಬಹಳ ಮುಂದಿದೆ. ಈ ಸಿನೆಮಾ ಜಗತ್ತಿನಾದ್ಯಂತ ಪ್ರದರ್ಶಿತವಾಗಿ, ಗಳಿಕೆಯಲ್ಲಿಯೂ ಸಾಧನೆ ಮಾಡಿದೆ.

ಲಯನ್ ಕಿಂಗ್ ಮೇಕಿಂಗ್ ಬಗ್ಗೆಯೇ ಬೇರೆಬೇರೆ ದೇಶಗಳ ಚಿತ್ರರಂಗದಲ್ಲಿ ಚರ್ಚೆಗಳು ನಡೆದಿವೆ. ಭಾರತೀಯ ಚಿತ್ರರಂಗದ ಅನೇಕರು ಇದರ ಮೇಕಿಂಗ್ ಶೈಲಿ ಬಗ್ಗೆ ವಿಶೇಷ ಆಸಕ್ತಿ ತೋರಿದ್ದಾರೆ. ಮೇಕಿಂಗ್ ವಿವರಗಳು ತಿಳಿದರೆ ಅಂಥ ತಂತ್ರಜ್ಞಾನದ ಬಳಕೆ ಸಾಧ್ಯತೆ ಚಿಂತನೆಗಳು ನಡೆಯಬಹುದು.

ಫೆಬ್ರವರಿ 27 ರಿಂದ ಮಾರ್ಚ್ 3 ರ ನಡುವೆ ಲಯನ್ ಕಿಂಗ್ ಮೇಕಿಂಗ್ನಲ್ಲಿ ತೊಡಗಿಸಿಕೊಂಡ ತಂತ್ರಜ್ಞರು ಮಾತನಾಡುತ್ತಾರೆ. ಆ್ಯನಿಮೇಶನ್ ಸಿನೆಮಾಗಳ ನಿರ್ಮಾಣ- ಕಸುಬುದಾರಿಕೆ ಬಗ್ಗೆ ಆಸಕ್ತಿ ಇರುವವರು ಈ ಸಂವಾದಲ್ಲಿ ಪಾಲ್ಗೊಳ್ಳಬಹುದು. ಇದು ನಡೆಯುವ ದಿನ, ಸಮಯ ಸದ್ಯದಲ್ಲಿಯೇ Biffes ಜಾಲತಾಣದಲ್ಲಿ ಪ್ರಕಟವಾಗುತ್ತದೆ.

ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವದ ಸಂದರ್ಭ ಗುಣಮಟ್ಟದ ಸಿನೆಮಾ ಪ್ರದರ್ಶನದ ಜತೆಗೆ ಸಿನೆಮಾ ಕ್ಷೇತ್ರದ ಬೇರೆಬೇರೆ ತಂತ್ರಜ್ಞಾನಗಳ ಬಗ್ಗೆ ಚರ್ಚೆ ಆಯೋಜಿತವಾಗಿರುವುದು ಆಸಕ್ತರ ಪ್ರಶಂಸೆಗೆ ಕಾರಣವಾಗಿದೆ. ಇದರಿಂದ ಪ್ರಸ್ತುತ ತಾಂತ್ರಿಕತೆಗೆ ಅನುಗುಣವಾದ ಸಿನೆಮಾಗಳ ನಿರ್ಮಾಣಕ್ಕೂ ಸಹಾಯವಾಗಲಿದೆ

ಅಮೆರಿಕಾದ ವಾಲ್ಟ್ ಡಿಸ್ನಿ ಮೊಶನ್ ಪಿಕ್ಚರ್ ನಿರ್ಮಿಸಿರುವ “ದ ಲಯನ್ ಕಿಂಗ್ “ಸಿನೆಮಾವನ್ನು ಖ್ಯಾತ ನಿರ್ದೇಶಕ ಜಾನ್ ಎಫ್. ನಿರ್ದೇಶಿಸಿದ್ದಾರೆ. ಜೆಫ್ ನಾಥರ್ಸನ್ ಅದ್ಬುತ ಚಿತ್ರಕಥೆ ರಚಿಸಿದ್ದಾರೆ. ಇದರ ಛಾಯಾಗ್ರಹಣವೂ ವಿಶಿಷ್ಟವಾಗಿದ್ದು ಕಾಲೇಬ್ ಡೆಸ್ಕೆನಲ್ ಅದನ್ನು ನಿರ್ವಹಿಸಿದ್ದಾರೆ. ಈ ಸಿನೆಮಾ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದೆ.

ವರದಿ: ಕುಮಾರ ರೈತ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com