ಸುನಿಯ 'ಸಖತ್' ಸಿನಿಮಾದಲ್ಲಿ ಗೊಲ್ಡನ್ ಸ್ಟಾರ್ ಗಣೇಶ್!

ಗಣೇಶ್ ಹಾಗೂ ಸುನಿಯ ಕಾಂಬಿನೇಶ್ ನಲ್ಲಿ ಮೂಡಿಬರುತ್ತಿರುವ ಸಖತ್  ಸಿನಿಮಾಕ್ಕೆ ನಿನ್ನೆ ಸರಳವಾಗಿ ಮುಹೂರ್ತ ನೆರವೇರಿದೆ.
ಗಣೇಶ್ , ಸುನಿ
ಗಣೇಶ್ , ಸುನಿ
Updated on

ಬೆಂಗಳೂರು: ಗಣೇಶ್ ಹಾಗೂ ಸುನಿಯ ಕಾಂಬಿನೇಶ್ ನಲ್ಲಿ ಮೂಡಿಬರುತ್ತಿರುವ ಸಖತ್  ಸಿನಿಮಾಕ್ಕೆ ನಿನ್ನೆ ಸರಳವಾಗಿ ಮುಹೂರ್ತ ನೆರವೇರಿದೆ. ಸುಪ್ರೀತಾ ಪ್ರೊಢಕ್ಷನ್ ಹಾಗೂ ಕೆವಿಎನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿಬರಲಿದೆ. ಈ ಮೂಲಕ ಚಮಾಕ್  ಜೋಡಿ ಮತ್ತೆ ಒಂದಾಗಿದೆ.

ರೋಮ್ಯಾಂಟಿಕ್ ಕಥಾ ಹಂದರದ ಈ  ಚಿತ್ರ ಪ್ರಸ್ತುತದಲ್ಲಿನ ರಿಯಾಲಿಟಿ ಶೋ ಹಾಗೂ ಕೋರ್ಟ್ ಕೇಸ್ ಸುತ್ತ ಸಾಗಲಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಸುರ್ಬಿ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದು, ಗಣೇಶ್  ಜೋಡಿಯಾಗಿ ನಟಿಸಲಿದ್ದಾರೆ.

ಜುದ್ಹಾ ಸ್ಯಾಂಡಿ ಸಂಗೀತ ಸಂಯೋಜಿಸಲಿದ್ದು, ಸಂತೋಷ್ ರಾಯ್ ಪಾಥಾಜೆ ಅವರ ಛಾಯಾಗ್ರಾಹಣವಿರಲಿದೆ. ಈ ಹಿಂದೆ ಚಮಾಕ್ ಚಿತ್ರದಲ್ಲೂ ಕೆಲಸ ಮಾಡಿದ್ದ ಈ ಇಬ್ಬರು ಸಖತ್ ಸಿನಿಮಾದಲ್ಲೂ ಮತ್ತೊಮ್ಮೆ ಕೆಲಸ ಮಾಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com