“ನಾನು ಮತ್ತು ಅಭಿಷೇಕ್ ಮೋದಿ ಹಾಗೂ ಟ್ರಂಪ್ ಇದ್ದಂತೆ” 

 ನಟ ಪ್ರಥಮ್ ನೂತನ ಚಿತ್ರ ’99 ಲಕ್ಷಕ್ಕೊಬ್ಬ’ ಚಿತ್ರದ ಟೈಟಲ್ ಅನ್ನು ಅಭಿಷೇಕ್ ಅಂಬರೀಷ್ ಬಿಡುಗಡೆಗೊಳಿಸಿದ್ದಾರೆ
ಅಭಿಷೇಕ್ ಮತ್ತು ಪ್ರಥಮ್
ಅಭಿಷೇಕ್ ಮತ್ತು ಪ್ರಥಮ್
Updated on: 

ಬೆಂಗಳೂರು:  ನಟ ಪ್ರಥಮ್ ನೂತನ ಚಿತ್ರ ’99 ಲಕ್ಷಕ್ಕೊಬ್ಬ’ ಚಿತ್ರದ ಟೈಟಲ್ ಅನ್ನು ಅಭಿಷೇಕ್ ಅಂಬರೀಷ್ ಬಿಡುಗಡೆಗೊಳಿಸಿದ್ದಾರೆ

ಹುಟ್ಟು ಹಬ್ಬ ಮಾಡ್ಕೊಳಲ್ಲಾ ಅಂತ ಹೇಳ್ತಾನೆ ಪ್ರಥಮ್, ಜೂನಿಯರ್ ರೆಬಲ್ ಸ್ಟಾರ್ ನ ಜೊತೆಯಲ್ಲಿ ಸಂಭ್ರಮಿಸಿದ್ದಾರೆ

ಆದರೆ ಇದಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ “ಟೈಟಲ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ವ್ಯಕ್ತಿಯೊಬ್ಬರು ಬರಬೇಕಿತ್ತು ಆದ್ರೆ ಅವರಿಗೆ ಇನ್ನೂ ಬೆಳಕಾಗಿಲ್ಲ, ನಿಧಾನಕ್ಕೆ ಬರ್ತಾರೆ” ಅಂತ ಅಭಿಷೇಕ್ ಅಂಬರೀಷ್ ಬಗ್ಗೆ ಪ್ರಥಮ್ ಲೇವಡಿ ಮಾಡಿದ್ದರು.

ಈ ವಿಷಯ ತಿಳಿದ ಅಭಿಷೇಕ್, “ನಾನ್ ಮಲಗೋ, ಏಳೋ ಸಮಯ ಪ್ರಥಮ್ ಗೆ ಏನ್ ಗೊತ್ತು? ಆತ ಹೈಪರ್ ಆಕ್ಟೀವ್ ಅನ್ನೋದು ಎಲ್ಲರಿಗೂ ಗೊತ್ತು, ತನ್ನ ಬಗ್ಗೆ ಎಲ್ಲ ಕಡೆ ಸುದ್ದಿ ವೈರಲ್ ಆಗ್ಲಿ ಅಂತ ಬಾಯಿಗೆ ಬಂದಿದ್ದನ್ನೇ ಮಾತಾಡ್ತಾನೆ” ಅಂತ ಟಾಂಗ್ ಕೊಟ್ರು

ಆದರೂ ಮಾತು ಮುಂದುವರಿಸಿದ ಪ್ರಥಮ್, “ನಾನು ಮತ್ತು ಅಭಿಷೇಕ್ ಮೋದಿ ಹಾಗೂ ಟ್ರಂಪ್ ಇದ್ದಂತೆ” ಅಂತ ಹೇಳಿಕೊಂಡ್ರು. ಹಾಗೂ ಅಭಿಷೇಕ್ ಗೆ ಜೋಡಿ ಬೆಳ್ಳಿ ಆನೆಗಳನ್ನು ಉಡುಗೊರೆಯಾಗಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com