ನಿರ್ದೇಶಕ ರವಿ ಅರಸು ಜೊತೆಗೆ 'ಆರ್ ಡಿಎಕ್ಸ್ 'ನಲ್ಲಿ ಶಿವಣ್ಣ 

ಸತ್ಯ ಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ರವಿ ಅರಸು ಜೊತೆಗೆ ಮುಂದಿನ ಚಿತ್ರದಲ್ಲಿ  ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್  ನಿರ್ಧರಿಸಿದ್ದಾರೆ.
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Updated on

ಬೆಂಗಳೂರು: ಸತ್ಯ ಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ರವಿ ಅರಸು ಜೊತೆಗೆ ಮುಂದಿನ ಚಿತ್ರದಲ್ಲಿ  ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್  ನಿರ್ಧರಿಸಿದ್ದಾರೆ.

ಆರ್ ಡಿಎಕ್ಸ್  ಶೀರ್ಷಿಕೆಯ ಸಿನಿಮಾ ಶಿವಣ್ಣನ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಆರ್ ಡಿ ಕ್ಸೆವೀಯರ್ ಒಳಾರ್ಥದ  ಈ ಶೀರ್ಷಿಕೆಯ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

34 ವರ್ಷಗಳ ಹಿಂದೆ ಹ್ಯಾಟ್ರಿಕ್ ಹಿರೋ  ವೃತ್ತಿ ಜೀವನ ಆರಂಭಿಸಿದ ದಿನವಾದ  ಫೆಬ್ರವರಿ 19 ರಂದು ನೂತನ ಸಿನಿಮಾಕ್ಕೆ ಚಾಲನೆ ನೀಡಲು ಚಿತ್ರತಂಡ ಯೋಚಿಸಿದೆ. ಅದೇ ದಿನ ಮುಹೂರ್ತ ನಡೆಯಲಿದ್ದು, ಅಂದಿನಿಂದ ಚಿತ್ರೀಕರಣ ಆರಂಭವಾಗಲಿದೆ 

ಚಂದ್ರಮೌಳಿ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸಲಿದ್ದಾರೆ ಎಂ. ಶರವಣನ್ ಅವರ ಛಾಯಾಗ್ರಾಹಣವಿರಲಿದೆ. ಆರ್ ಡಿಎಕ್ಸ್  ಶರವಣನ್ ಅವರಿಗೆ ಚೊಚ್ಚಲ ಕನ್ನಡ ಸಿನಿಮಾವಾಗಿದೆ.ಸೇತುಪತಿ ಖ್ಯಾತಿಯ ಸಾಹಸ ನಿರ್ದೇಶಕ ರಾಜಶೇಖರ್ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಲಿದ್ದಾರೆ.

ಧನುಷ್ ಅವರ ಪಟ್ಟಾಸ್ ಬಿಡುಗಡೆಯಾದ ಬಳಿಕ ಉಳಿದ ಪಾತ್ರಗಳ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹರ್ಷ ಅವರ ಭಜರಂಗಿ 2 ಚಿತ್ರದಲ್ಲಿ ಸದ್ಯ ಬ್ಯುಸಿಯಾಗಿರುವ ಶಿವಣ್ಣನಿಗೆ 2020ರಲ್ಲಿ ಶುಭ ಆರಂಭ ದೊರೆತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com