ಬೆಂಗಳೂರು: ದುನಿಯಾ ವಿಜಯ್ ನಿರ್ದೇಶಿಸಿ ಅಭಿನಯಿಸುತ್ತಿರುವ ಸಲಗ ಚಿತ್ರದ ಮೊದಲ ಹಾಡು ಭಾನುವಾರ ಬಿಡುಗಡೆಯಾಯಿತು.
ಶಿವರಾಜ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದ ಕಾರ್ಯಕ್ರಮದಲ್ಲಿ ಚಿತ್ರರಂಗ, ಕ್ರಿಕೆಟ್ ಹಾಗೂ ಕೆಲ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಮತ್ತೊಂದು ಆಕರ್ಷಣೆ ಎಂದರೆ ನಿರ್ದೇಶಕರಾದ ತರುಣ್ ಸುದೀರ್, ಗುರುದತ್, ರಘುರಾಮ್, ಯೋಗಿ ಜಿ ರಾಜ್, ನರ್ತನ್, ಡಾ. ಸೂರಿ, ಎಪಿ ಅರ್ಜುನ್, ಪವನ್ ಒಡೆಯರ್, ಚೇತನ್ ಕುಮಾರ್ ಮತ್ತು ಮಹೇಶ್ ಕುಮಾರ್ ಒಂದೇ ವೇದಿಕೆಯಲ್ಲಿ ಕಂಡುಬಂದರು.
ಶಿವಣ್ಣ ಆಡಿಯೋ ಬಿಡುಗಡೆ ಮಾಡಿದರು. ಕುಡಿತಕ್ಕೆ ಸಂಬಂಧಿಸಿದ ಈ ಹಾಡು ಈಗಾಗಲೇ ಪ್ರೇಕ್ಷಕರ ಮನಸೊರೆಗೊಳಿಸಿದೆ. ಈ ಮಧ್ಯೆ ದುನಿಯಾ ವಿಜಯ್ ಅವರ ಹುಟ್ಟುಹಬ್ಬದ ದಿನವಾದ ಜನವರಿ 20ಕ್ಕೆ ಸಲಗ ಟೀಸರ್ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಇದು ಅಂಡರ್ ವರ್ಲ್ಡ್, ಪ್ರೀತಿ ಹಾಗೂ ಸಾಹಸ ಪ್ರಧಾನವಾದ ಚಿತ್ರವಾಗಿದೆ.
ಎ2 ಮ್ಯೂಸಿಕ್ ಸಂಗೀತದ ಹಕ್ಕುಗಳನ್ನು ಪಡೆದುಕೊಂಡಿದೆ. ಅಚ್ಯುತ್ ಕುಮಾರ್, ತ್ರಿವೇಣಿ ರಾವ್ ಹಾಗೂ ಯಶ್ ಶೆಟ್ಟಿ ಮತ್ತಿತತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬಿಗ್ ಬಜೆಟ್ ಸಿನಿಮಾ ಫೆಬ್ರವರಿ 23 ರಂದು ತೆರೆಗೆ ಅಪ್ಪಳಿಸಲಿದೆ.
Advertisement