ನಟಿ ಮಯೂರಿ ಬರ್ತಡೇ ವಿಶೇಷ: 'ಆದ್ಯಂತ' ಫಸ್ಟ್ ಲುಕ್ ರಿಲೀಸ್

ನಟಿ ಮಯೂರಿ ಜನ್ಮದಿನದ ಅಂಭ್ರಮದಲ್ಲಿದ್ದು ಇದೇ ದಿನ ಅವರ ಮುಂದಿನ ಚಿತ್ರ "ಆದ್ಯಂತ" ಫಸ್ಟ್ ಲುಕ್ ಬಿಡುಗಡೆಯಾಗಿದೆ,
ಮಯೂರಿ
ಮಯೂರಿ
Updated on

ನಟಿ ಮಯೂರಿ ಜನ್ಮದಿನದ ಅಂಭ್ರಮದಲ್ಲಿದ್ದು ಇದೇ ದಿನ ಅವರ ಮುಂದಿನ ಚಿತ್ರ "ಆದ್ಯಂತ" ಫಸ್ಟ್ ಲುಕ್ ಬಿಡುಗಡೆಯಾಗಿದೆ,

ರಾಜಮೌಳಿ ಹಾಗೂ ರಾಮಗೋಪಾಲ್ ವರ್ಮಾ ಅವರೊಡನೆ ಕೆಲಸದ ಅನುಭವ ಹೊಂದಿರುವ ಪುನೀತ್ ಶರ್ಮಾನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಮಯೂರಿ ವಿವಾಹವಾದ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರವಾಗಿದೆ. 

ಚಿತ್ರದ ಬಹುತೇಕ ಚಿತ್ರೀಕರಣ ಇದಾಗಲೇ ಪೂರ್ಣವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಗತಿಯಲ್ಲಿದೆ. ಲೇಖನಾ ಕ್ರಿಯೇಷನ್ಸ್ ಹಾಗೂ ಆರ್.ಆರ್. ಮೂವೀಸ್ ಬ್ಯಾನರ್ ನಡಿ ರಮೇಶ್ ಬಾಬು ಟಿ. ಇದಕ್ಕೆ ಬಂಡವಾಳ ಹೂಡಿದ್ದಾರೆ.

ದಿಲೀಪ್, ರಮೇಶ್ ಭಟ್, ಶ್ರೀನಾಥ್ ವಸಿಷ್ಟ, ಪ್ರಶಾಂತ್, ನಿಖಿಲ್ ಗೌಡ ತಾರಾಂಗಣದ ಈ ಚಿತ್ರಕ್ಕೆ ಸ್ಯಾಂಡಿ ಸಂಗೀತ, ನವೀನ್ ಕುಮಾರ್ ಚಲ್ಲ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com