ಖಳನಾಯಕಿಯಾಗಿ ನಟಿಸಲು ಸಿದ್ದ: ನಟಿ ಪ್ರಿಯಾಮಣಿ

ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಅಂದದ ಬೆಡಗಿ ಪ್ರಿಯಾಮಣಿ(ಪ್ರಿಯಾ ವಾಸುದೇವ್ ಮಣಿ ಅಯ್ಯರ್) ತಮಗೆ ಖಳ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ. 
ಪ್ರಿಯಮಣಿ
ಪ್ರಿಯಮಣಿ
Updated on

ಬೆಂಗಳೂರು: ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಅಂದದ ಬೆಡಗಿ ಪ್ರಿಯಾಮಣಿ(ಪ್ರಿಯಾ ವಾಸುದೇವ್ ಮಣಿ ಅಯ್ಯರ್) ತಮಗೆ ಖಳ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ. 

೨೦೦೪ರಲ್ಲಿ ಕಂಗಲಾಲ್ ಕೈಧು ಸೇ ಚಿತ್ರದೊಂದಿಗೆ ತಮಿಳು ಚಿತ್ರರಂಗಕ್ಕೆ ಪರಿಚಯವಾದ ಪ್ರಿಯಾಮಣಿ, ೨೦೦೬ರಲ್ಲಿ ‘ಪರುಥೀವೀರನ’ ತಮಿಳು ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದರು. ಲಾಕ್ ಡೌನ್ ನಿಂದಾಗಿ ಈಗ ಮನೆಗೆ ಸೀಮಿತಗೊಂಡಿರುವ ಪ್ರಿಯಾ ಮಣಿ ’ವಿರಾಟ್ ಪರ್ವಂ’ ಚಿತ್ರದಲ್ಲಿ ನಕ್ಸಲೈಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. 
ಲಾಕ್‌ಡೌನ್ ದಿನಗಳಲ್ಲಿ ಹೊಸ ಕಥೆಗಳನ್ನು ಕೇಳುತ್ತಿದ್ದೇನೆ. ಚಿತ್ರರಂಗದಲ್ಲಿ ಈ ಹಿಂದೆ ನಾಯಕರಿಗೆ ಮಾತ್ರ ಹೆಚ್ಚಿನ ಗೌರವ ನೀಡುತ್ತಿದ್ದರು ಈಗ ನಾಯಕ ನಾಯಕಿ ಇಬ್ಬರಿಗೂ ಸಮಾನ ಗೌರವ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಜಲ್ ಅಗರ್ವಾಲ್, ತಮನ್ನಾ, ನಯನತಾರಾ, ಸಮಂತಾರಂತಹ ನಾಯಕಿಯರು ಅವರಿಗಿರುವ ಅವರ ಮಾರುಕಟ್ಟೆಗೆ ತಕ್ಕಂತೆ ಸಂಭಾವನೆ ಪಡೆದು ಕೊಳ್ಳುತ್ತಾರೆ. ತಮಗೆ ಸಂಭಾವನೆಗಿಂತ ಒಳ್ಳೆಯ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಬೇಕೆಂಬುದು ತಮ್ಮಾಸೆ ಎಂದು ತಿಳಿಸಿದ್ದಾರೆ. ಪ್ರಸ್ತುತ ನಿರ್ಮಾಪಕರು ತಮಗೆ ನೀಡುತ್ತಿರುವ ಸಂಭಾವನೆಗೆ ತೃಪ್ತಿಯಿದೆ. ಒಳ್ಳೆಯ ಗಂಡ, ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ಮದುವೆಯಾದ ಮೂರನೇ ದಿನವೇ ಚಿತ್ರದ ಚಿತ್ರೀಕರಣಕ್ಕೆ ತೆರಳಿದ್ದಾಗಿ, ಅತ್ತೆಯ ಮನೆಯವರೂ ಕೂಡಾ ಚಿತ್ರಗಳಲ್ಲಿ ನಟಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಅಲ್ಲದೆ ಪತಿ ತಮ್ಮ ಎಲ್ಲಾ ಕಾಲ್‌ಶೀಟ್ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

’ಪಡಿಯಪ್ಪ ’ ಚಿತ್ರದಲ್ಲಿ ’ ರಮ್ಯ ಕೃಷ್ಣ ನಟಿಸಿದ್ದ ‘ ನೀಲಾಂಬರಿ’ ಯಂತಹ ನೆಗೆಟಿವ್ ಶೇಡ್ ಪಾತ್ರದಲ್ಲಿ ನಟಿಬೇಕೆಂದು ಬಹಳ ದಿನಗಳಿಂದಲೂ ಕಾಯುತ್ತಿದ್ದೇನೆ. ಅದು ಯಾವಾಗ ನಿಜವಾಗಲಿದೆ ಎಂಬುದು ಗೊತ್ತಿಲ್ಲ. ಇನ್ನೂ ಪೂರ್ಣ ಪ್ರಮಾಣದ ಹಾಸ್ಯ ಪಾತ್ರದಲ್ಲಿ ನಟಿಸುವ ಆಸೆಯೂ ಇದೆ. ಲಾಕ್‌ಡೌನ್ ಅಂತ್ಯಗೊಂಡು ಯಾವಾಗ ಶೂಟಿಂಗ್ ಪ್ರಾರಂಭವಾಗುತ್ತದೊ ಎಂದು ತಿಳಿದಿಲ್ಲ. ಪ್ರಸ್ತುತ ಟಿವಿ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೇನೆ ಎಂದು ಪ್ರಿಯಾಮಣಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com