ಡಾರ್ಲಿಂಗ್ ಕೃಷ್ಣ ಹೊಸ ಚಿತ್ರಕ್ಕೆ ಮಹೂರ್ತ ಫಿಕ್ಸ್: ಜೂನ್ 18ಕ್ಕೆ srikrishna@gmail.com ಶೂಟಿಂಗ್ ಸ್ಟಾರ್ಟ್

ಕೊರೋನಾ ಸಾಂಕ್ರಾಮಿಕ ಮಧ್ಯೆಯೇ srikrishna@gmail.com ಚಿತ್ರಕ್ಕೆ ಮಹೂರ್ತ ಫಿಕ್ಸ್ ಆಗಿದೆ.
ನಟ ಕೃಷ್ಣ
ನಟ ಕೃಷ್ಣ
Updated on

ಕೊರೋನಾ ಸಾಂಕ್ರಾಮಿಕ ಮಧ್ಯೆಯೇ srikrishna@gmail.com ಚಿತ್ರಕ್ಕೆ ಮಹೂರ್ತ ಫಿಕ್ಸ್ ಆಗಿದೆ.

ಸಂದೇಶ್ ನಾಗರಾಜ್ ನಿರ್ಮಿಸಿ ಡಾರ್ಲಿಂಗ್ ಕೃಷ್ಣ ಅಭಿನಯದ ಚಿತ್ರ ಜೂನ್ 18 ರಂದು ಅರ್ಜುನ್ ಜನ್ಯಾ ಅವರ ಸ್ಟುಡಿಯೋದಲ್ಲಿ ಸೆಟ್ಟೇರಲಿದೆ. ಈ ಚಿತ್ರಕ್ಕೆ ನಾಗಶೇಖರ್ ನಿರ್ದೇಸನವಿದ್ದು ಮಹೂರ್ತ ಕಾರ್ಯಕ್ರಮ ಅತ್ಯಂತ ಸರಳವಾಗಿ ನೆರವೇರುತ್ತದೆ ಎಂದು ಪ್ರೊಡಕ್ಷನ್ಸ್ ಹೌಸ್ ಘೋಷಿಸಿದೆ.

ಪ್ರಮುಖ ನಟ, ನಿರ್ದೇಶಕ ಮತ್ತು ತಾಂತ್ರಿಕ ಸಿಬ್ಬಂದಿ ಉಪಸ್ಥಿತಿಯಲ್ಲಿ ಚಿತ್ರವನ್ನು ಪ್ರಾರಂಭಿಸಲಾಗುವುದು. ಅರ್ಜುನ್ ಜನ್ಯಾ ಅವರೊಂದಿಗೆ ನಿರ್ದೇಶಕರು ಹಾಡಿನ ಧ್ವನಿಮುದ್ರಣವನ್ನು ಪ್ರಾರಂಭಿಸಲಿದ್ದಾರೆ. ಏತನ್ಮಧ್ಯೆ, ಉಳಿದ ಪಾತ್ರವರ್ಗವನ್ನು ಅಂತಿಮಗೊಳಿಸಲಾಗುತ್ತಿದೆ.

ಆಕ್ಷನ್-ಲವ್ ಎಂಟರ್‌ಟೈನರ್‌ನಲ್ಲಿ ರಾಷ್ಟ್ರ ಪ್ರಶಸ್ತಿ ಜೇತ ದತ್ತಣ್ಣ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. srikrishna@gmail.com ಚಿತ್ರಕ್ಕೆ ಸತ್ಯ ಹೆಗ್ಡೆ ಕ್ಯಾಮೆರಾ ವರ್ಕ್ ಇದ್ದು ಅರುಣ್ ಸಾಗರ್ ಆರ್ಟ್ ಕೆಲಸವಿದೆ. ದೀಪು ಎಸ್ ಕುಮಾರ್ ಎಡಿಟ್ ಡೆಸ್ಕ್ ಮತ್ತು ರವಿವರ್ಮ ಸಾಹಸ  ಚಿತ್ರಕ್ಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com