ಆರ್ ಜೆ ರೋಹಿತ್ ಈಗ 'ರೌಡಿ ಫೆಲೋ'

ನಟ, ಟಿವಿ ನಿರೂಪಕ ಮತ್ತು ಆರ್.ಜೆ.,ರೋಹಿತ್ ಬಕಾಸುರ ಚಿತ್ರದಲ್ಲಿ ಕಡೇ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಅವರ ಮುಂದಿನ ಯೋಜನೆ ಇದೀಗ ತಯಾರಾಗಿದ್ದು ಅದಕ್ಕೆ "ರೌಡಿ ಫೆಲೋ" ಎನ್ನುವ ಶೀರ್ಷಿಕೆ ಇಡಲಾಗಿದೆ.
ರೌಡಿ ಫೆಲೋ
ರೌಡಿ ಫೆಲೋ
Updated on: 

ನಟ, ಟಿವಿ ನಿರೂಪಕ ಮತ್ತು ಆರ್.ಜೆ.,ರೋಹಿತ್ ಬಕಾಸುರ ಚಿತ್ರದಲ್ಲಿ ಕಡೇ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಅವರ ಮುಂದಿನ ಯೋಜನೆ ಇದೀಗ ತಯಾರಾಗಿದ್ದು ಅದಕ್ಕೆ "ರೌಡಿ ಫೆಲೋ" ಎನ್ನುವ ಶೀರ್ಷಿಕೆ ಇಡಲಾಗಿದೆ. ಪದ್ಮಾವತಿ ಪಿಕ್ಚರ್ಸ್ ಸಹಯೋಗದಲ್ಲಿ ಇತ್ತೀಚೆಗೆ "ದಿಯಾ" ಚಿತ್ರ ನಿರ್ಮಿಸಿದ್ದ  ಸ್ವರ್ಣಲತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ.

ಎಫ್‌ಎಫ್‌ಎಫ್ ಪ್ರಸ್ತುತಪಡಿಸಿದ ಕಮರ್ಷಿಯಲ್ ಎಂಟರ್‌ಟೈನರ್‌ನಲ್ಲಿ ಇನ್ನೂ ಕೆಲವು ಗಮನಾರ್ಹ ಸಂಗತಿಗಳಿದ್ದು ರೌಡಿ ಫೆಲೋ ಚಿತ್ರಕಥೆಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್  ಮಾರ್ಗದರ್ಶನವಿದೆ. ಅಲ್ಲದೆ ಈ ಚಿತ್ರ ರೋಹಿತ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರವಾಗಿದೆ.  ಚಿತ್ರದ ನಟನ ಫಸ್ಟ್ ಲುಕ್ ಅನ್ನು ರೋಹಿತ್ ಜನ್ಮದಿನವಾದ ಜೂನ್ 19ಕ್ಕೆ ಅನಾವರಣಗೊಳಿಸಲಾಗಿದೆ.

ಬ್ಲ್ಯಾಕ್ ಆಂಡ್ ವೈಟ್ ಲುಕ್ ನಲ್ಲಿ ನಟನ ಮುಖದ ಕ್ಲೋಸ್-ಅಪ್ ಶಾಟ್ ಒಳಗೊಂಡ ಈ ಫಸ್ಟ್ ಲುಕ್  ಕೋಪವನ್ನು ಎತ್ತಿ ತೋರಿಸುತ್ತಿದೆ.  "ನಾನು ಪ್ರಶಾಂತ್ ಅವರಿಗೆ 4 ಕಥೆಗಳನ್ನು ಪ್ರಸ್ತುತಪಡಿಸಿದ್ದೇನೆ, ಅದರಲ್ಲಿ ಪ್ರದೀಪ್ ಬರೆದ ಈ ಸ್ಕ್ರಿಪ್ಟ್ ನನಗೆ ಉತ್ತಮವಾಗಿ ಹೊಂದುತ್ತದೆ ಎಂದು ಅವರು ಭಾವಿಸಿದರು. ಈ ಸ್ಕ್ರಿಪ್ಟ್ ಅನ್ನು ನಾವು ಒಪ್ಪಿದ್ದೇವೆ" ನಿರ್ದೇಶಕ ಹೇಳಿದ್ದಾರೆ.

ರೌಡಿ ಫೆಲೋ ಚಿತ್ರದಲ್ಲಿ ರೋಹಿತ್ ಎದುರು ವಿದ್ಯಾ ಪ್ರದೀಪ್ ಜೋಡಿಯಾಗಿದ್ದಾರೆ "ಬಂಗಾರ ಸನ್ ಆಫ್ ಬಂಗಾರದ ಮನುಷ್ಯ" ಚಿತ್ರದ ಮೂಲಕ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದ ವಿದ್ಯಾ ಪ್ರದೀಪ್ ರೌಡಿ ಫೆಲೋ ಚಿತ್ರದಲ್ಲಿ ರೋಹಿತ್ ಎದುರು ಜೋಡಿಯಾಗಿದ್ದಾರೆ.

ತಾಯಿ-ಮಗನ ಸಂಬಂಧವನ್ನು ಪರಿಶೋಧಿಸುವ  ಈ ಚಿತ್ರದಲ್ಲಿ ಹಿರಿಯ ನಟಿ ಊರ್ವಶಿ ಪ್ರಮುಖ ಪಾತ್ರದಲ್ಲಿದ್ದಾರೆ.ರಾಮ ರಾಮ ರೇ ಮತ್ತು ಒಂದಲ್ಲ ಎರಡಲ್ಲ  ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ ಛಾಯಾಗ್ರಾಹಕ ಲವಿತ್ ಕೂಡ ರೌಡಿ ಫೆಲೋ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ರವಿ ಬಸ್ರೂರ್ ಹಿನ್ನೆಲೆ ಸಂಗೀತವಿರಲಿದ್ದು  ನಕುಲ್ ಅಭ್ಯಾಂಕರ್ ಹಾಡಿನ ಸಂಯೋಜನೆ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com